NEWS

Siddaramaiah: ಸಿಎಂ ಕುರ್ಚಿ ಮೇಲೆ ಟಗರು ಕೂತಿದೆ, ಯಾರಿಂದಲೂ ಅಲ್ಲಾಡಿಸೋಕಾಗಲ್ಲ! ಸಿದ್ದು ಪರ ಜಮೀರ್ ಬ್ಯಾಟಿಂಗ್

ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮುಡಾ ಹಗರಣ (Muda Scam) ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಲೋಕಾಯುಕ್ತ (Lokayukta) ಅಧಿಕಾರಿಗಳು ಮತ್ತೊಂದೆಡೆ, ಇಡಿ (ED) ಅಧಿಕಾರಿಗಳು ಬೆನ್ನುಬಿದ್ದಿದ್ದಾರೆ. ಈ ನಡುವೆ ಪ್ರತಿಪಕ್ಷಗಳು (Opposition parties) ಸಿಎಂ ಸ್ಥಾನಕ್ಕೆ ರಾಜೀನಾಮೆ (Resignation) ನೀಡಬೇಕು ಎಂದು ಆಗ್ರಹಿಸುತ್ತಿವೆ. ಮತ್ತೊಂದೆಡೆ ಸಿದ್ದು ಪರ ಬ್ಯಾಟಿಂಗ್ ಮಾಡುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತೀಚೆಗೆ ಜೆಡಿಎಸ್ ನಾಯಕ ಜಿಟಿ ದೇವೇಗೌಡ (GT Devegowda) ಅವರು ಬಹಿರಂಗ ಸಭೆಯಲ್ಲಿಯೇ ಸಿದ್ದು ಪರ ಬ್ಯಾಟಿಂಗ್ ಮಾಡಿ ಸದ್ದು ಮಾಡಿದ್ದರು, ಅದೇ ರೀತಿ ಇದೀಗ ಜಮೀರ್ ಅವರು ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಇಡಿ ಬರಲಿ, ಐಟಿ (IT) ಬರಲಿ ಯಾವುದೇ ಬರಲಿ ಸಿದ್ದರಾಮಯ್ಯ ಹೆದರುವುದಿಲ್ಲ. ಟಗರು ಟಗರೇ ಎಂದು ಸಿದ್ದರಾಮಯ್ಯ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು, ಮೂಡಾ ಹಗರಣ ಮುಚ್ಚಲು ಜಾತಿ ಗಣತಿ ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಜಾತಿಗಣತಿ ವಿಚಾರವನ್ನು ಒಂದು ವರ್ಷದ ಕೆಳಗೆ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ತೆಗೆದುಕೊಂಡಿರುವ ನಿರ್ಧಾರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಟಗರು ಸಿಎಂ ಕುರ್ಚಿ ಮೇಲೆ ಕೂತಿದೆ ಅದನ್ನು ಅಲ್ಲಾಡಿಸೋಕು ಆಗಲ್ಲ ಸಿಎಂ ಸ್ಥಾನದ ಆಕಾಂಕ್ಷಗಳ ಲಿಸ್ಟ್ ಬೆಳೆಯುತ್ತಿರುವ ಕುರಿತು ಮಾತನಾಡಿದ ಅವರು, ಸಿಎಂ ಆಗಲು ಎಲ್ಲಾರಿಗೂ ಆಸೆ ಇದ್ದೇ ಇರುತ್ತೆ, ಮುಸ್ಲಿಂರಿಗೂ ಆಸೆ ಇರುತ್ತೆ, ದಲಿತರಿಗೆ, ಒಕ್ಕಲಿಗರಿಗೆ ಎಲ್ಲರಿಗೂ ಇರುತ್ತೆ. ಆದರೆ ಈಗ ಸಿಎಂ ಕುರ್ಚಿ ಖಾಲಿ ಇಲ್ಲ ಆದ್ದರಿಂದ ಏಕೆ ಚರ್ಚೆ, ಸಿದ್ದರಾಮಯ್ಯನವರು ಕುರ್ಚಿ ಮೇಲೆ ಕೂತಿದ್ದಾರೆ ಐದು ವರ್ಷ ಸಿದ್ದರಾಮಯ್ಯರೇ ಇರ್ತಾರೆ. ಸಿಎಂ ಸ್ಥಾನ ಉಳಿಸಲು ಪ್ಲಾನ್ ಎ, ಪ್ಲಾನ್ ಬಿ ಇಲ್ಲ ಸಿ ನೂ ಇಲ್ಲ. ಯಾವಾಗಲೂ ಟಗರು ಸಿದ್ದರಾಮಯ್ಯ ಮಾತ್ರ…, ಡಿಕೆ ಸುರೇಶ್ ಕೂಡ ಹೇಳಿದ್ದಾರೆ ಕುರ್ಚಿ ಖಾಲಿ ಇಲ್ಲ ಸಿದ್ದರಾಮಯ್ಯನವರೇ ಸಿಎಂ ಎಂದು ಟಗರು ಕುರ್ಚಿ ಮೇಲೆ ಕೂತಿದೆ ಟಗರನ್ನು ಅಲ್ಲಾಡಿಸಲು ಆಗೋದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರ ಬಿದ್ದರೆ ಬೀಳಲಿ, ಜಾತಿಗಣತಿ ಜಾರಿ ಮಾಡಲೇಬೇಕು: ಕಾಂಗ್ರೆಸ್‌ನ ಹಿರಿಯ ನಾಯಕನಿಂದ ಸ್ಪೋಟಕ ಹೇಳಿಕೆ! FIR ಆದ ತಕ್ಷಣ ರಾಜೀನಾಮೆ ನೀಡಬೇಕು ಎಂದು ಯಾವ ಕಾನೂನಿನಲ್ಲೂ ಇಲ್ಲ ಜಿಟಿ ದೇವೇಗೌಡ ಕೂಡ ನಮ್ಮ ಪಕ್ಷ ಅಲ್ಲ ಆದರೆ ಅವರಿಗೆ ಮೂಡಾದ ಸತ್ಯಾಂಶ ಗೊತ್ತಿದೆ. ಹಾಗಾಗಿಯೇ ದಸರಾ ಕಾರ್ಯಕ್ರಮದ ವೇದಿಕೆ ಮೇಲೆ ಆ ರೀತಿ ಹೇಳಿದ್ದಾರೆ. ಕುಮಾರಸ್ವಾಮಿ ಕೂಡ ಬೇಲ್ ಮೇಲೆ ಇದ್ದಾರೆ. ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ನೀಡಬೇಕು ಎಂದು ಯಾವ ಕಾನೂನಿನಲ್ಲೂ ಇಲ್ಲ. ದೇವರಾಜ್ ಅರಸ್ ಆದ ನಂತರ ಎರಡನೇ ಬಾರಿ ಸಿಎಂ ಆಗಿದ್ದು ಸಿದ್ದರಾಮಯ್ಯ, ಅದ್ದರಿಂದ ಎಲ್ಲಾರಿಗಿಂತ ಜನಪ್ರೀಯತೆ ಇರುವುದರಿಂದ ಅದನ್ನು ಸಹಿಸಲು ಇವರಿಗೆ ಆಗುತ್ತಿಲ್ಲ ಎಂದಿದ್ಧಾರೆ. ನಮ್ಮ ರಾಜ್ಯದಲ್ಲಿ ಮೋದಿಗಿಂತ ಸಿದ್ದರಾಮಯ್ಯನವರಿಗೆ ಜನಪ್ರಿಯತೆ ಹೆಚ್ಚು ನಮ್ಮ ರಾಜ್ಯದಲ್ಲಿ ಮೋದಿಗಿಂತಲೂ ಸಿದ್ದರಾಮಯ್ಯ ಅವರಿಗೆ ಜನಪ್ರಿಯತೆ ಹೆಚ್ಚಿದೆ. ಒಂದು ಕಡೆ ಮೋದಿ ಇನ್ನೊಂದು ಕಡೆ ಸಿದ್ದರಾಮಯ್ಯ ನಿಲ್ಲಲಿ ಆಗ ಯಾರ ಬಳಿ ಜನ ಜಾಸ್ತಿ ಹೋಗ್ತಾರೆ ಅಂತ ನೋಡಿ, ಅದನ್ನು ಕೂಡ ಸಾಬೀತು ಮಾಡಿದ್ದಾರೆ. ಈ ಹಿಂದೆ ದಾವಣಗೆರೆಯಲ್ಲಿಯೇ ಹುಟ್ಟು ಹಬ್ಬ ಆಚರಿಸಿಕಾಂಡಾಗ, ಅವರ ಜನ ಬೆಂಬಲ ಹೇಗಿತ್ತು ಎನ್ನೋದನ್ನ ಎಲ್ಲರೂ ನೋಡಿದ್ದಾರೆ.. ಹಾಗಾಗಿ ಬಿಜೆಪಿಗರಿಗೆ ಹೊಟ್ಟೆ ಉರಿ, ಬಿಜೆಪಿಯವರು ರಾಜೀನಾಮೆ ನೀಡಿ ಎಂದು ಕೇಳುತ್ತಿದ್ದಾರೆ. ಈ ಸೈಟು ಯಾರ ಅವಧಿಯಲ್ಲಿ ಕೊಟ್ಟಿದ್ದು ಹೇಳಿ, ಬಿಜೆಪಿ ಅವಧಿಯಲ್ಲಿ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಕೊಟ್ಟಿದ್ದು, ಸಿದ್ದರಾಮಯ್ಯ ನವರದ್ದು ಒಂದು ಕೇಸ್ ಕೂಡ ಇಲ್ಲ ಆದ್ದರಿಂದ ಇದನ್ನು ಹಿಡಿದಿದ್ದಾರೆ ಎಂದು ಜಮೀರ್ ಕಿಡಿಕಾರಿದ್ದಾರೆ. ಟಿಫನ್‌ಗೆ ಹೆಲಿಕ್ಯಾಪ್ಟರ್ ನಲ್ಲೇ ಓಡಾಡುತ್ತಿದ್ದ ಜನಾರ್ದನ ರೆಡ್ಡಿ ಜನಾರ್ದನ ರೆಡ್ಡಿ ಸಿಎಂ ಬೆಂಗಾವಲು ವಾಹನಗಳಿಗೆ ಅಡ್ಡ ಹೋಗಿರುವ ಬಗ್ಗೆ ಮಾತನಾಡಿದ ಜಮೀರ್, ಈ ಹಿಂದೆ ಅಧಿಕಾರ ಇದ್ದಾಗ ಅವರಿಗೆ ಭೂಮಿನೇ ಕಾಣುತ್ತಿರಲಿಲ್ಲ, ಎಲ್ಲಾ ಅಕಾಶದಲ್ಲಿ ಓಡಾಡುತ್ತಿದ್ದರು. ಟಿಫನ್ ಮಾಡಲು ಕೂಡ ಹೆಲಿಕ್ಯಾಪ್ಟರ್ ನಲ್ಲೇ ಓಡಾಡುತ್ತಿದ್ದರು. ಈಗ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ ಅದ್ದರಿಂದ ಈ ರೀತಿಯಾಗಿ ಮಾಡುತ್ತಿದ್ದಾರೆ. ದೇವರು ಅವಕಾಶ ಕೊಟ್ಟಿದ್ದಾರೆ ತಗ್ಗಿಬಗ್ಗಿ ನಡೆಯಲಿ ಎಂದು ಹೇಳಿದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.