NEWS

Karnataka Caste Census: ಮುಡಾ ಹಗರಣ ಮುಚ್ಚಲು ಜಾತಿ ಜನಗಣತಿ? ಕಾಂಗ್ರೆಸ್‌ನಲ್ಲೇ ನಡೀತಿದೆ ಪರ, ವಿರೋಧ ಚರ್ಚೆ

ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ ಪ್ರಮುಖವಾಗಿ ಜಾತಿ ಜನಗಣತಿ (Caste Census) ವಿಚಾರವಾಗಿ ಭಾರೀ ಚರ್ಚೆ ಆಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಶೀಘ್ರದಲ್ಲೇ ಜಾರಿ ಗಣತಿ ಎಂದು ಹೇಳಿದ ಬಳಿಕ ಜಾತಿ ಜನಗಣತಿ ಚಾಲ್ತಿಗೆ ಬಂದಿದೆ. ಆದರೆ ಇದು ಮುಡಾ ಹಗರಣ (MUDA Scam) ಮರೆಮಾಚಲು ಮಾಡ್ತಿರೋ ಪ್ಲ್ಯಾನ್‌ ಅನ್ನೋ ಮಾತುಗಳು ಕೇಳಿ ಬರ್ತಿವೆ. ಮುಡಾ ಹಗರಣ ಮುಚ್ಚಲು ಜಾತಿ ಜನಗಣತಿ! ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ ಸದ್ದು ಮಾಡ್ತಿರೋ ಸಮಯದಲ್ಲೇ ಜಾತಿ ಜನಗಣತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಕಟ ಮಾಡಿದ್ದರು. ಇದು ಕಾಂಗ್ರೆಸ್‌ನಲ್ಲೇ ಅಪಶ್ವರಕ್ಕೂ ಕಾರಣವಾಗಿತ್ತು. ಬಹುತೇಕ ಸಚಿವರು ಜಾತಿ ಜನಗಣತಿ ಜಾರಿ ಬಗ್ಗೆ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲುವ ಕೆಲಸ ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್‌ ಮಾತನಾಡಿ ಜಾತಿ ಜನಗಣತಿ ಸ್ವೀಕಾರ ಮಾಡಿಲ್ಲ ಅಂದರೆ ಮಾಡಿಲ್ಲ ಅಂತಾರೆ. ಜಾತಿ ಗಣತಿ ಸ್ವೀಕಾರ ಮಾಡಿದ್ರೆ ಯಾಕೆ ಈಗ? ಅಂತಾ ವ್ಯಾಖ್ಯಾನ ಮಾಡ್ತಾರೆ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ಅಸೆಂಬ್ಲಿಗೆ ತರಬೇಕಾ ಬೇಡವಾ ಅಂತಾ ತೀರ್ಮಾನ ಮಾಡ್ತೇವೆ ಎಂದಿದ್ದಾರೆ. ಕೇಂದ್ರ ಜನಗಣತಿ ಕೂಡ ಆಗಲಿ, ಸಮಸ್ಯೆ ಆಗಿದ್ದರೆ ಸರಿಪಡಿಸಿಕೊಳ್ಳಬಹುದು. ರಾಜ್ಯ ಸರ್ಕಾರ 160 ಕೋಟಿ ಖರ್ಚು ಮಾಡಿದೆ ಅದರ ಲೆಕ್ಕ‌ ಕೊಡಬೇಕು. ಇಲ್ಲದಿದ್ದರೆ ಸಿಎಜಿ ಕೂಡ ಆಕ್ಷೇಪ ಮಾಡುತ್ತದೆ ಎಂದಿದ್ದಾರೆ. ಸರ್ಕಾರ ಬಿದ್ದರೂ ಸರಿ ಜಾತಿ ಜನಗಣತಿ ಬಿಡುಗಡೆ ಮಾಡ್ಬೇಕು ಜಾತಿ ಜನಗಣತಿ ಬಿಡುಗಡೆ ವಿಚಾರದಲ್ಲಿ ಪರ ವಿರೋಧ ಚರ್ಚೆ ಬಗ್ಗೆ ಮಡಿಕೇರಿಯಲ್ಲಿ ಕೃಷಿ ಸಚಿವ ಎನ್‌ ಚಲುವರಾಯಸ್ವಾಮಿ ಮಾತನಾಡಿ, ಇಡೀ ರಾಷ್ಟ್ರದಲ್ಲಿ ಜಾತಿ ಜನಗಣತಿ ಆಗಬೇಕು ಅನ್ನೋದು ನನ್ನ ಅಭಿಪ್ರಾಯ. ಅದರಿಂದ ಏನೋ ನಡೆಯುತ್ತೆ ಅನ್ನೋ ಬಗ್ಗೆ ಅಪಪ್ರಚಾರ ಆಗ್ತಿದೆ ಎಂದಿದ್ದಾರೆ. ದಾವಣಗೆರೆಯಲ್ಲಿ ಜಮೀರ್‌ ಅಹ್ಮದ್‌ ಖಾನ್‌ ಮಾತನಾಡಿ, ಇದು ಮುಡಾ ಹಗರಣ ಮುಚ್ಚಲು ಮಾಡ್ತಿರೋ ನಿರ್ಧಾರ ಅಲ್ಲ. ಒಂದು ವರ್ಷದ ಕೆಳಗೆ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ತೆಗೆದುಕೊಂಡ ನಿರ್ಧಾರ ಎಂದಿದ್ದಾರೆ. ಇದನ್ನೂ ಓದಿ: Pleasure Marriages: ಪ್ರವಾಸಿಗರನ್ನೇ ಟೆಂಪರವರಿ ಮದುವೆ ಆಗ್ತಿದ್ದಾರೆ ಸುಂದರ ಯುವತಿಯರು! ಟ್ರೆಂಡ್ ಆಗ್ತಿದೆ ಪ್ಲೆಷರ್ ಮ್ಯಾರೇಜ್, ಎಲ್ಲಿ ಗೊತ್ತಾ?​​ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ ನಮ್ಮೆಲ್ಲರ ನಾಯಕ ರಾಹುಲ್ ಗಾಂಧಿ ಪ್ರಪಂಚ ಮೇಲೆ ಬಿದ್ದರೂ ಕೂಡ ಜಾತಿ ಜನ ಗಣತಿ ಮಾಡುತ್ತೇವೆ ಅಂತ ಹೇಳಿದ್ದಾರೆ. ಸರ್ಕಾರ ಯಾಕೆ ಯೋಚನೆ ಮಾಡ್ತಾ ಇದೆ ಅಂತ ಗೊತ್ತಿಲ್ಲ. ಸರ್ಕಾರ ಬಿದ್ದರೂ ಸರಿ ಜಾತಿ ಜನಗಣತಿ ಬಿಡುಗಡೆ ಮಾಡ್ಬೇಕು ಎಂದಿದ್ದಾರೆ. ಜಾತಿ ಗಣತಿಗೆ ಬಿಜೆಪಿ ವಿರೋಧ ಇಲ್ಲ ಜಾತಿ ಜನಗಣತಿ ಬಿಡುಗಡೆ ಬಗ್ಗೆ ವಿಪಕ್ಷಗಳು ಮಾತ್ರ ವ್ಯಂಗ್ಯವಾಡಿದ್ದು, ಇದೆಲ್ಲ ರಾಜಕೀಯ, ಇಷ್ಟು ದಿನ ಜಾರಿ ಮಾಡಲಿಲ್ಲ. ಈಗೇನು ಜಾರಿ‌ ಮಾಡ್ತಾರೆ ಅವರು, ಇದೆಲ್ಲ ರಾಜಕೀಯ ಅಷ್ಟೇ ಅಂದಿದ್ದಾರೆ ಕೇಂದ್ರ ಸಚಿವ ಕುಮಾರಸ್ವಾಮಿ. ವಿಜಯೇಂದ್ರ ಮಾತನಾಡಿ ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ. ಹೀಗಾಗಿ ಜಾತಿ ಜನಗಣತಿ ವಿಚಾರ ಎತ್ತಿದ್ದಾರೆ. ಜಾತಿ ಗಣತಿಗೆ ಬಿಜೆಪಿ ವಿರೋಧ ಇಲ್ಲ ಎಂದಿದ್ದಾರೆ. ಜಾತಿ ಜನ ಗಣತಿ ಬಗ್ಗೆ ಸರ್ಕಾರದಲ್ಲೇ ಪರವಿರೋಧ ಚರ್ಚೆಗಳು ನಡೆದಿದ್ದು, ಸರ್ಕಾರ ಜಾತಿ ಜನಗಣತಿಯನ್ನು ಬಿಡುಗಡೆ ಮಾಡುತ್ತೋ ಇಲ್ವೋ ಅನ್ನೋ ಬಗ್ಗೆ ಇನ್ನೂ ಕನ್ಫರ್ಮ್‌ ಇಲ್ಲ. ಆದರೆ ಮುಡಾ ಹಗರಣ ಮರೆಮಾಚುವ ಉದ್ದೇಶ ಎನ್ನುವುದು ವಿರೋಧ ಪಕ್ಷಗಳ ವಾದ. ಜೊತೆಗೆ ಮುಡಾ ಹಗರಣದ ಬಗ್ಗೆಯೂ ವಾಗ್ವಾದ ನಡೆಯುತ್ತಲೇ ಇದೆ ಅನ್ನೋದು ವಿಶೇಷ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.