NEWS

Hair Growth: ಶಾಂಪು, ಕಂಡಿಷನರ್ ಅಷ್ಟೇ ಸಾಕಾಗೋದಿಲ್ಲ; ಕೂದಲು ಬೆಳವಣಿಗೆಗೆ ಈ ಮಲ್ಟಿವಿಟಮಿನ್ ಮಾತ್ರೆಗಳು ದಿ ಬೆಸ್ಟ್!

ಸಾಂದರ್ಭಿಕ ಚಿತ್ರ ಶಾಂಪೂ ಮತ್ತು ಕಂಡಿಷನರ್ (Shampoo and Conditioner) ಬಳಸಿ ಆರೋಗ್ಯಕರ ಕೂದಲು ಪಡೆಯುತ್ತೇವೆ ಎಂಬುವುದು ಸ್ವಲ್ಪ ಅಸಾಧ್ಯದ ಮಾತು. ಇವುಗಳ ಜೊತೆಗೆ ಕೂದಲಿನ ಬೆಳವಣಿಗೆಗೆ (Hair Growth) ಸಹಾಯ ಮಾಡುವ ಅತ್ಯುತ್ತಮ ಮಲ್ಟಿವಿಟಮಿನ್ ಮಾತ್ರೆಗಳನ್ನು ತೆಗೆದುಕೊಂಡಲ್ಲಿ ನಾವು ಆರೋಗ್ಯಕರ ಕೂದಲನ್ನು ಪಡೆಯಬಹುದು. ಮಲ್ಟಿವಿಟಮಿನ್ ಮಾತ್ರೆಗಳು (Multivitamin Tablets) ನಿಮ್ಮ ಆಹಾರದಲ್ಲಿ ಬಯೋಟಿನ್, ವಿಟಮಿನ್ ಎ, ಸಿ & ಡಿ, ಸತು ಮತ್ತು ಕಬ್ಬಿಣದಂತಹ ಅಂಶವನ್ನು ಸೇರಿಸುವ ಮೂಲಕ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ (Market) ಬೇಕಾದಷ್ಟು ವಿಟಮಿನ್‌ ಮಾತ್ರೆಗಳಿವೆ, ಹೀಗಾಗಿ ಯಾವುದು ಬೆಸ್ಟ್‌ ಅಂತಾ ಕಂಡುಹಿಡಿಯುವಲ್ಲಿ ಗೊಂದಲ ಉಂಟಾಗಬಹುದು. ಕೂದಲು ಉದುರುವಿಕೆಯನ್ನು ಅನುಭವಿಸುತ್ತಿದ್ದರೆ ಅಥವಾ ಕೂದಲಿನ ಸ್ಥಿತಿಯನ್ನು ಸುಧಾರಿಸಲು ಬಯಸಿದರೆ ನಿಮಗೆ ಉಪಯುಕ್ತವಾದ ಬೆಸ್ಟ್‌ ಮಲ್ಟಿವಿಟಮಿನ್ ಮಾತ್ರೆಗಳ ಬಗ್ಗೆ ಹೇಳ್ತಿವಿ ನೋಡಿ. ಮಲ್ಟಿವಿಟಮಿನ್ ಮಾತ್ರೆಗಳನ್ನು ಹುಡುಕುತ್ತಿರುವವರಿಗೆ ಟಿಪ್ಸ್‌ ಕಾರ್ಬಮೈಡ್ ಫೋರ್ಟೆ ಬಯೋಟಿನ್ ಹೇರ್‌ ಗ್ರೋಥ್‌ ಟ್ಯಾಬ್ಲೆಟ್ಸ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಕಾರ್ಬಮೈಡ್ ಫೋರ್ಟೆ ಬಯೋಟಿನ್ ಮಾತ್ರೆಗಳು ಪ್ರತಿ ಡೋಸ್‌ಗೆ 10000 mcg ಬಯೋಟಿನ್ ಅನ್ನು ನೀಡುತ್ತದೆ. ಕೂದಲಿನ ಪ್ರಯೋಜನಗಳನ್ನು ಹೊರತುಪಡಿಸಿ, ‌ಇವು ಚರ್ಮ ಮತ್ತು ಉಗುರುಗಳ ಮೇಲೂ ಕೆಲಸ ಮಾಡುತ್ತದೆ. 120 ಮಾತ್ರೆಗಳನ್ನು ಒಳಗೊಂಡಿರುವ ಬಾಟಲಿಗಳಲ್ಲಿ ಅವುಗಳನ್ನು ಪ್ಯಾಕ್ ಮಾಡಲಾಗುತ್ತದೆ, ಕೂದಲ ಗುಣಮಟ್ಟದ ಬೆಳವಣಿಗೆಗೆ ಈ ಮಾತ್ರೆಗಳು ಸಹಾಯ ಮಾಡುತ್ತವೆ. OZiva ಹೇರ್ ವಿಟಮಿನ್ ಕ್ಯಾಪ್ಸುಲ್ ಓಜಿವಾ ಹೇರ್ ವಿಟಮಿನ್ ಕ್ಯಾಪ್ಸುಲ್ಗಳು ಬಯೋಟಿನ್, ಕಬ್ಬಿಣ, DHT ಬ್ಲಾಕರ್ಸ್ ವಿಟಮಿನ್ ಇ ಅನ್ನು ಒಳಗೊಂಡಿರುತ್ತದೆ, ಇದು ಕೂದಲು ಬೆಳವಣಿಗೆಗೆ ಸಹಕಾರಿಯಾಗಿದೆ. ಜೊತೆಗೆ ವೈಜ್ಞಾನಿಕವಾಗಿ ಅನುಮೋದಿಸಲಾಗಿದೆ. ಈ ಕ್ಯಾಪ್ಸುಲ್‌ಗಳು ಪುರುಷರು ಮತ್ತು ಮಹಿಳೆಯರಿಗೆ ಇಬ್ಬರಿಗೂ ಸೂಕ್ತವಾಗಿದೆ. ಪ್ರತಿ ಬಾಟಲಿಯಲ್ಲಿ 60 ಕ್ಯಾಪ್ಸುಲ್‌ಗಳು ಇರುತ್ತವೆ. ZEROHARM ಬಯೋಟಿನ್ ಮಾತ್ರೆ ಕೂದಲಿನ ಬೆಳವಣಿಗೆಗೆ ZEROHARM ಬಯೋಟಿನ್ ಮಾತ್ರೆಗಳು ಸಹ ಪ್ರಮುಖವಾಗಿವೆ. ಈ ಮಾತ್ರೆಗಳು ಬಯೋಟಿನ್ ಎಂದು ಕರೆಯಲ್ಪಡುವ ವಿಟಮಿನ್ ಬಿ 7 ನೊಂದಿಗೆ ಲೋಡ್ ಆಗಿದ್ದು ಅದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. 60 ಟ್ಯಾಬ್ಲೆಟ್‌ಗಳ ಡೋಸೇಜ್‌ನೊಂದಿಗೆ, ZEROHARM ಅಡ್ಡ ಪರಿಣಾಮಗಳನ್ನು ಉಂಟುಮಾಡದೇ ಕೂದಲಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಸ್ವಿಸ್ ಬಯೋಟಿನ್+ ಸ್ವಿಸ್ ಬಯೋಟಿನ್+ ಕೂದಲಿನ ಸ್ವಾಸ್ಥ್ಯವನ್ನು ಸುಧಾರಿಸಲು ಮತ್ತು ಕೆರಾಟಿನ್ ಮಟ್ಟವನ್ನು ಹೆಚ್ಚಿಸಲು ಬಯೋಟಿನ್‌ನ 100% RDA ಅನ್ನು ಒದಗಿಸುತ್ತದೆ. ಆಸ್ಟ್ರೇಲಿಯಾದ ಈ ಉತ್ಪನ್ನ ನಿಮಗೆ ಬಯೋಟಿನ್, ನಿಕೋಟಿನಮೈಡ್, ರೋಸ್‌ಶಿಪ್ ಮತ್ತು ವಿಟಮಿನ್ ಸಿಯನ್ನು ಒದಗಿಸುತ್ತದೆ. ಪ್ರತಿ ಬಾಟಲಿಯು 30 ಮಾತ್ರೆಗಳೊಂದಿಗೆ ಬರುತ್ತದೆ ಮತ್ತು ಆರೋಗ್ಯಕರ ಕೂದಲನ್ನು ಹೊಂದಲು ಬಯಸುವವರಿಗೆ ಇದು ಸೂಕ್ತವಾಗಿದೆ. ಹೆಲ್ತ್‌ಕಾರ್ಟ್‌ ಹೆಚ್‌ಕೆ ವೈಟಲ್ಸ್ ಹೇರ್ ವಿಟಮಿನ್ ಈ ಮಾತ್ರೆಯ ಸೂತ್ರೀಕರಣವು ಕೆರಾಟಿನ್ ರಚನೆಯನ್ನು ಉತ್ತೇಜಿಸಲು ಮತ್ತು ಕೂದಲು ಉದುರುವಿಕೆಯ ವಿರುದ್ಧ ಹೋರಾಡಲು DHT ಬ್ಲಾಕರ್‌ಗಳು, ಒಮೆಗಾ ಕೊಬ್ಬಿನಾಮ್ಲಗಳು ಮತ್ತು ಬಯೋಟಿನ್ ಅನ್ನು ಬಳಸುತ್ತದೆ. ಒಂದು ಬಾಟಲಿಯಲ್ಲಿ 60 ಕ್ಯಾಪ್ಸುಲ್‌ಗಳನ್ನು ಹೊಂದಿದೆ ಮತ್ತು ಕೂದಲಿನ ಬೆಳವಣಿಗೆ ಮತ್ತು ದಪ್ಪವಾಗುವುದರಲ್ಲಿ ಶಾಶ್ವತ ಫಲಿತಾಂಶವನ್ನು ನೀಡುತ್ತದೆ. ಹಿಮಾಲಯನ್ ಆರ್ಗಾನಿಕ್ಸ್ ಬಯೋಟಿನ್ 10,000mcg ನಿಮ್ಮ ಕೂದಲು ಮತ್ತೆ ಬೆಳೆಯುವ ಪ್ರಕ್ರಿಯೆಯನ್ನು ನೈಸರ್ಗಿಕವಾಗಿ ಉತ್ಕೃಷ್ಟಗೊಳಿಸಲು ಬಯಸಿದರೆ ಈ ಮಾತ್ರೆಗಳೇ ನಿಮಗೆ ಬೆಸ್ಟ್.‌ ಬಯೋಟಿನ್‌ನೊಂದಿಗೆ ಲೋಡ್ ಮಾಡಲಾದ ಈ ಮಾತ್ರೆಗಳನ್ನು ಕೂದಲನ್ನು ಬಲಪಡಿಸಲು, ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ರೂಪಿಸಲಾಗಿದೆ. ಪ್ರತಿ ಬಾಟಲಿಯಲ್ಲಿ 120 ಮಾತ್ರೆಗಳಿರುತ್ತವೆ. HXN ಬಯೋಟಿನ್ ಮಾತ್ರೆ ಈ ಪೂರಕವು ಪ್ರತಿ ಟ್ಯಾಬ್ಲೆಟ್‌ಗೆ ಹೆಚ್ಚು ಕೇಂದ್ರೀಕೃತವಾದ 10,000mcg ಬಯೋಟಿನ್ ಅನ್ನು ಹೊಂದಿದೆ, ಇದು ಕೂದಲಿನ ಸ್ಥಿತಿಸ್ಥಾಪಕತ್ವಕ್ಕೆ ಒಳ್ಳೆಯದು ಮತ್ತು ಕೂದಲು ಉದುರುವಿಕೆ, ತುರಿಕೆ ನೆತ್ತಿ ಮತ್ತು ತಲೆಹೊಟ್ಟುಗಳನ್ನು ಕಡಿಮೆ ಮಾಡುತ್ತದೆ. ಒಂದು ಪ್ಯಾಕ್‌ನಲ್ಲಿ 60 ಮಾತ್ರೆಗಳು ನಿಮಗೆ ಸಿಗುತ್ತವೆ. ನುಟ್ರೋವಾ ಕೆರಾಸ್ಟ್ರೆಂಥ್ (NUTROVA Kerastrength) ಕೂದಲು ಉದುರುವಿಕೆಯನ್ನು ತಡೆಗಟ್ಟಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಈ ಪೂರಕವು ಬಯೋಟಿನ್ ಅನ್ನು ಎ, ಸಿ, ಡಿ3 ಮತ್ತು ಬಿ-ಕಾಂಪ್ಲೆಕ್ಸ್‌ನಂತಹ ಅಗತ್ಯ ವಿಟಮಿನ್‌ಗಳನ್ನು ನೀಡುತ್ತದೆ. ಪ್ರತಿ ಪ್ಯಾಕ್‌ಗೆ 30 ಕ್ಯಾಪ್ಸುಲ್‌ಗಳೊಂದಿಗೆ, ಇದು ಆರೋಗ್ಯಕರ ಕೂದಲಿಗೆ ಸಹಕರಿಸುತ್ತದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.