NEWS

Kidney and liver Health: ನಿಮ್ಮ ಕಿಡ್ನಿ, ಲಿವರ್ ಚೆನ್ನಾಗಿ ಇರ್ಬೇಕಾ? ಹಾಗಾದರೆ ಪ್ರತಿದಿನ ತಪ್ಪದೇ ಈ ಕೆಲಸ ಮಾಡಿ!

ಸಾಂದರ್ಭಿಕ ಚಿತ್ರ ಮೂತ್ರಪಿಂಡ ಮತ್ತು ಯಕೃತ್ತು (Kidney and Liver) ನಮ್ಮ ದೇಹದ ಬಹುಮುಖ್ಯ‌ ಅಂಗಗಳು. ಇವು ನಮ್ಮ ದೇಹದಿಂದ (Body) ವಿಷಕಾರಿ ಅಂಶಗಳನ್ನು ಫಿಲ್ಟರ್ ಮಾಡಲು ಮತ್ತು ತೆಗೆದುಹಾಕಲು ದಣಿವರಿಯದೇ ಕೆಲಸ ಮಾಡುತ್ತವೆ. ಆದರೆ ಕಾಲಾನಂತರದಲ್ಲಿ ಈ ಅಂಗಗಳು ಸೋಲಬಹುದು. ಕೆಲವಷ್ಟು ಅಭ್ಯಾಸಗಳು (Habits) ಈ ಅಂಗಗಳನ್ನು ಆರೋಗ್ಯಕರವಾಗಿಡುವಲ್ಲಿ (Health) ಸಹಕಾರಿಯಾಗಿವೆ. ಹೌದು, ಪ್ರತಿದಿನ ಬೆಳಗ್ಗೆ ಮಾಡಬಹುದಾದ ಕೆಲವು ಸರಳವಾದ ಅಭ್ಯಾಸಗಳು ಮೂತ್ರಪಿಂಡ ಹಾಗೂ ಯಕೃತ್ತಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕಿ ಅವುಗಳನ್ನು ಶುದ್ಧೀಕರಿಸುವಲ್ಲಿ ಸಹಕಾರಿಯಾಗಿವೆ. ಅಂಥ 5 ಅಭ್ಯಾಸಗಳನ್ನು ಇಲ್ಲಿ ವಿವರಿಸಲಾಗಿದೆ. 1. ಯೋಗದೊಂದಿಗೆ ದಿನ ಪ್ರಾರಂಭಿಸಿ : ಯೋಗ, ನಿರ್ದಿಷ್ಟವಾಗಿ ಉಸಿರಾಟದ ವ್ಯಾಯಾಮಗಳು, ಮುಂದಕ್ಕೆ ಬಾಗುವುದು ಮತ್ತು ತಿರುಗುವಂಥ ಕೆಲವು ಭಂಗಿಗಳು ನಿಮ್ಮ ಅಂಗಗಳನ್ನು ಶುದ್ಧೀಕರಿಸಲು ಗಮನಾರ್ಹವಾಗಿ ಕೊಡುಗೆ ನೀಡಬಹುದು. ಈ ಭಂಗಿಗಳು ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ ಮತ್ತು ವಿಷವನ್ನು ಹೊರಹಾಕುವಿಕೆಯನ್ನು ಉತ್ತೇಜಿಸುತ್ತದೆ. ಜರ್ನಲ್ ಆಫ್ ಆಲ್ಟರ್ನೇಟಿವ್ ಮತ್ತು ಕಾಂಪ್ಲಿಮೆಂಟರಿ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಯೋಗವನ್ನು ಅಭ್ಯಾಸ ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮತ್ತು ರಕ್ತಪರಿಚಲನೆಯನ್ನು ಹೆಚ್ಚಿಸುವ ಮೂಲಕ ಯಕೃತ್ತು ಮತ್ತು ಮೂತ್ರಪಿಂಡಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಬಹುದು. ಇದಕ್ಕಾಗಿ ಅರ್ಧ ಮತ್ಸ್ಯೇಂದ್ರಾಸನ ಮತ್ತು ಪಶ್ಚಿಮೋತ್ತಾನಾಸನಗಳಂಥ ಭಂಗಿಗಳು ಹೆಚ್ಚು ಪ್ರಯೋಜನಕಾರಿಯಾಗಬಹುದು. ಇದನ್ನೂ ಓದಿ: Walking Tips: ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡಬೇಕೆ ಅಥವಾ ಊಟದ ನಂತರ ವಾಕ್ ಮಾಡಬೇಕೆ? ಇವೆರಡರಲ್ಲಿ ಯಾವುದು ಬೆಸ್ಟ್? 2. ಬೆಳಗಿನ ಆಹಾರ ಅಥವಾ ಪಾನೀಯ : ಬೆಳಗ್ಗೆ ನೀವು ಸೇವಿಸುವ ಉತ್ತಮ ಆಹಾರ ಅಥವಾ ಪಾನೀಯಗಳು ಡಿಟಾಕ್ಸ್ ಪ್ರಯತ್ನಗಳನ್ನು ಬೆಂಬಲಿಸಬಹುದು. ಒಂದು ಲೋಟ ಬೆಚ್ಚಗಿನ ನಿಂಬೆ ನೀರಿನಿಂದ ನಮ್ಮ ದಿನವನ್ನು ಪ್ರಾರಂಭಿಸುವುದು ಜನಪ್ರಿಯ ಮತ್ತು ಪರಿಣಾಮಕಾರಿ ಅಭ್ಯಾಸವಾಗಿದೆ. ನಿಂಬೆಹಣ್ಣುಗಳು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ವಿಷವನ್ನು ಹೊರಹಾಕಲು ಮತ್ತು ಯಕೃತ್ತಿನ ಕಾರ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಅಲ್ಲದೇ ನಮ್ಮ ಬೆಳಗಿನ ಉಪಹಾರದಲ್ಲಿ ಬೆಳ್ಳುಳ್ಳಿ, ಅರಿಶಿನ ಮತ್ತು ಸೊಪ್ಪಿನಂತಹ ಆಹಾರಗಳನ್ನು ಸೇರಿಸುವುದು ಉತ್ತಮ. ಈ ಆಹಾರಗಳು ಯಕೃತ್ತಿನ ಶುದ್ಧೀಕರಣ ಪ್ರಕ್ರಿಯೆಯನ್ನು ಹೆಚ್ಚಿಸುವ ಗುಣಲಕ್ಷಣಗಳನ್ನು ಹೊಂದಿವೆ ಎಂದು ಅಧ್ಯಯನಗಳು ತೋರಿಸಿವೆ. 3. ಮೃದುವಾದ ಬ್ರಶ್‌ ಸ್ಕ್ರಬ್‌ನೊಂದಿಗೆ ಬೆಳಗಿನ ಸ್ನಾನ : ಬೆಳಗ್ಗೆ ಮೊದಲು ಸ್ನಾನ ಮಾಡುವುದು ನಿಮ್ಮನ್ನು ಎಚ್ಚರಗೊಳಿಸುವುದು ಮಾತ್ರವಲ್ಲ, ಬದಲಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೇ ಮೃದುವಾದ ಬ್ರಶ್‌ ಸ್ಕ್ರಬ್‌ ಬಳಸುವುದು ಕೂಡ ದೇಹದಿಂದ ವಿಷವನ್ನು ತೆಗೆದುಹಾಕಲು ಮುಖ್ಯವಾಗಿದೆ. ಅದರಲ್ಲೂ ಬೆಚ್ಚಗಿನ ಸ್ನಾನಕ್ಕಿಂತ ಮೊದಲು ಹೀಗೆ ಮಾಡುವುದು ಹೆಚ್ಚು‌ ಪರಿಣಾಮಕಾರಿಯಾಗಿದೆ. ಇದು ಡೆಡ್‌ಸ್ಕಿನ್‌ಗಳನ್ನು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹದ ನೈಸರ್ಗಿಕ ನಿರ್ವಿಶೀಕರಣ ಪ್ರಕ್ರಿಯೆಗಳನ್ನು ಬೆಂಬಲಿಸುತ್ತದೆ. 4. ದೈನಂದಿನ ವ್ಯಾಯಾಮ : ದೈಹಿಕ ಚಟುವಟಿಕೆಯು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ನಿಯಮಿತ ವ್ಯಾಯಾಮವು ಮೂತ್ರಪಿಂಡಗಳು ಮತ್ತು ಯಕೃತ್ತನ್ನು ಶುದ್ಧೀಕರಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿನ ಅಧ್ಯಯನವು ನಿಯಮಿತ ವ್ಯಾಯಾಮವು ಯಕೃತ್ತಿನ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಚುರುಕಾದ ನಡಿಗೆ, ಬೆಳಗಿನ ಜಾಗಿಂಗ್‌ ಅಥವಾ ಏರೋಬಿಕ್ ವ್ಯಾಯಾಮಗಳ ಸೆಷನ್ ಹೀಗೆ ದೈನಂದಿನ ದೈಹಿಕ ಚಟುವಟಿಕೆಗೆ ಬದ್ಧರಾಗಿರುವುದು ನಿಮ್ಮ ಮೂತ್ರಪಿಂಡಗಳು ಮತ್ತು ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. 5. ಕಚ್ಚಾ ತರಕಾರಿ ಜ್ಯೂಸ್‌ ಸೇವನೆ : ಒಂದು ಲೋಟ ತಾಜಾ, ಹಸಿ ತರಕಾರಿ ರಸದೊಂದಿಗೆ ದಿನವನ್ನು ಪ್ರಾರಂಭಿಸುವುದು ನಿಮ್ಮ ದೇಹಕ್ಕೆ ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಸಾಂದ್ರತೆಯನ್ನು ಒದಗಿಸಬಹುದು. ಇದು ನಿರ್ವಿಶೀಕರಣವನ್ನು ಬೆಂಬಲಿಸುತ್ತದೆ. ಅದರಲ್ಲೂ ಬೀಟ್ರೂಟ್, ಕ್ಯಾರೆಟ್ ಮತ್ತು ಪಾಲಕ್‌ ಮುಂತಾದ ತರಕಾರಿಗಳು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಏಕೆಂದರೆ ಅವುಗಳು ಯಕೃತ್ತಿನ ಕಾರ್ಯವನ್ನು ಉತ್ತೇಜಿಸುವ ಮತ್ತು ಮೂತ್ರಪಿಂಡಗಳನ್ನು ಶುದ್ಧೀಕರಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಅಲ್ಲದೇ ತರಕಾರಿಗಳು ಯಕೃತ್ತಿನ ನೈಸರ್ಗಿಕವಾಗಿ ವಿಷಕಾರಿ ಅಂಶಗಳನ್ನು ಹೊರಹಾಕುವ ನಿರ್ವಿಶೀಕರಣ ಪ್ರಕ್ರಿಯೆಗಳನ್ನು ಬೆಂಬಲಿಸುತ್ತದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.