NEWS

Health Care: ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ನಿಮ್ಮನ್ನು ಬಿಡದಂತೆ ಕಾಡ್ತಿದ್ಯಾ? ಹಾಗಾದ್ರೆ ಊಟ ಮಾಡುವಾಗ ಈ ತಪ್ಪುಗಳ ಮಾಡ್ಬೇಡಿ!

ಓಡುತ್ತಿರುವ ಈ ವೇಗದ ಜಗತ್ತಿನಲ್ಲಿ ತಾಳ್ಮೆಯಿಂದ ಯಾವುದೇ ರೀತಿಯ ಕೆಲಸಗಳನ್ನು ಮಾಡಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಬ್ಯುಸಿ ಶೆಡ್ಯೂಲ್​ನಿಂದ (Busy Schedule) ಅನೇಕ ಮಂದಿಗೆ ತಮ್ಮ ಆರೋಗ್ಯ ಹಾಗೂ ತಾವು ಸೇವಿಸುವ ಆಹಾರ ಬಗ್ಗೆ ಕಾಳಜಿ ವಹಿಸಲು ಕೂಡ ಕಷ್ಟವಾಗುತ್ತಿದೆ. ಸಾಕಷ್ಟು ಜನ ಊಟ ಮಾಡುವಾಗ ತ್ವರಿತವಾಗಿ ಅಗಿಯುತ್ತಾರೆ. ಅಲ್ಲದೇ ಇನ್ನೂ ಕೆಲ ಮಂದಿ ಆಹಾರವನ್ನು (Food) ಅಗಿಯದೇ ನುಂಗುತ್ತಾರೆ. ಆದರೆ ಈ ಅಭ್ಯಾಸವು ನಮ್ಮ ಆರೋಗ್ಯ (Health) ಮತ್ತು ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಸಾಮಾನ್ಯವಾಗಿ ಬೇಗ, ಬೇಗನೆ ಆಹಾರ ತಿನ್ನುವುದು ಜೀರ್ಣಕ್ರಿಯೆ ಸಮಸ್ಯೆಗಳಾದ ಗ್ಯಾಸ್ಟ್ರಿಕ್​, ಹೊಟ್ಟೆ ಉಬ್ಬುವಿಕೆ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಕೊನೆಗೆ ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೆಲವು ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಆದ್ದರಿಂದ ತಾಳ್ಮೆಯಿಂದ ಮತ್ತು ಪ್ರಜ್ಞೆ ಇಟ್ಟುಕೊಂಡು ಸಮಾಧಾನದಿಂದ ಊಟ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಜೀರ್ಣಕ್ರಿಯೆಯಲ್ಲಿ ಭಾರಿ ವ್ಯತ್ಯಾಸವನ್ನು ಉಂಟು ಮಾಡಬಹುದು. ತ್ವರಿತವಾಗಿ ತಿನ್ನುವುದು ಗ್ಯಾಸ್ಟ್ರಿಕ್​ ಮತ್ತು ಹೊಟ್ಟೆ ಉಬ್ಬುವಿಕೆ ಏಕೆ ಉಂಟಾಗುತ್ತದೆ? ನಾವು ವೇಗವಾಗಿ ತಿನ್ನುವಾಗ, ನಾವು ಆಹಾರದೊಂದಿಗೆ ಗಾಳಿಯನ್ನು ನುಂಗುತ್ತೇವೆ. ಈ ಗಾಳಿಯು ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಆಹಾರವನ್ನು ಚೆನ್ನಾಗಿ ಅಗಿಯುವಾಗ, ಅದರ ಸಣ್ಣ ಕಣಗಳಲ್ಲಿ ನಮ್ಮ ಹೊಟ್ಟೆಯನ್ನು ಪ್ರವೇಶಿಸಿದಾಗ ಮಾತ್ರ ಜೀರ್ಣಕ್ರಿಯೆ ನಡೆಯುತ್ತದೆ. ಆದರೆ ಹೀಗೆ ಮಾಡಿ ಬೇಗ ತಿಂದರೆ ಆಹಾರ ಗಟ್ಟಿಯಾಗಿಯೇ ಹೊಟ್ಟೆಯೊಳಗೆ ಸೇರುತ್ತದೆ. ಇದರಿಂದ ಜೀರ್ಣಕಾರಿ ಕಿಣ್ವಗಳಿಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ನಂತರ ಕರುಳಿನಲ್ಲಿ ಹುದುಗುವಿಕೆ ಪ್ರಕ್ರಿಯೆಯು ಗ್ಯಾಸ್ಟ್ರಿಕ್​ ಸಮಸ್ಯೆಯನ್ನು ಉಂಟು ಮಾಡುತ್ತದೆ. ನಾವು ಸಾಕಷ್ಟು ತಿಂದಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ಮೆದುಳು ಗ್ರಹಿಸಲು ಸಾಮಾನ್ಯವಾಗಿ ಸುಮಾರು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನಾವು ವೇಗವಾಗಿ ತಿನ್ನುವಾಗ, ಮೆದುಳಿನಲ್ಲಿ ಪೂರ್ಣತೆಯ ಭಾವನೆ ವಿಳಂಬವಾಗುತ್ತದೆ. ಆದ್ದರಿಂದ ನಾವು ಮೊದಲೇ ಹೆಚ್ಚು ಆಹಾರವನ್ನು ಸೇವಿಸುತ್ತೇವೆ. ಇದು ಹೊಟ್ಟೆಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಹೊಟ್ಟೆ ಉಬ್ಬುವಿಕೆಗೆ ಕಾರಣವಾಗುತ್ತದೆ. ಗ್ಯಾಸ್ ಮತ್ತು ಹೊಟ್ಟೆಯ ಆಮ್ಲವನ್ನು ತಪ್ಪಿಸುವ ಮಾರ್ಗಗಳು ಯಾವುವು? ಯಾವಾಗಲೂ ಸ್ವಲ್ಪ-ಸ್ವಲ್ಪ ಆಹಾರವನ್ನೇ ಅಗಿದು ನುಂಗುತ್ತಿದ್ದೇವೋ ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಪ್ರತಿ ಬಾರಿ ನುಂಗುವುದಕ್ಕೂ ಮುನ್ನ ಕನಿಷ್ಠ 20 ರಿಂದ 30 ಬಾರಿ ಆಹಾರವನ್ನು ಅಗಿಯಿರಿ. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ತಿಂದ ಕಕ್ಕುವ ಬದಲು ತಾಳ್ಮೆಯಿಂದ ತಿನ್ನುವುದು ಗಾಳಿ ಸೇರುವುದನ್ನು ಕಡಿಮೆ ಮಾಡುತ್ತದೆ ಮತ್ತು ಆಹಾರವನ್ನು ಪ್ರಕ್ರಿಯೆಗೊಳಿಸಲು ಹೊಟ್ಟೆಗೆ ಸಾಕಷ್ಟು ಸಮಯವನ್ನು ನೀಡುತ್ತದೆ. ಊಟ ಮಾಡುವಾಗ ನೀರು ಕುಡಿಯಬೇಡಿ ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಆದರೆ ಊಟದ ಸಮಯದಲ್ಲಿ ಹೆಚ್ಚು ನೀರು ಕುಡಿಯಬಾರದು. ಏಕೆಂದರೆ ಇದು ಜೀರ್ಣಕ್ರಿಯೆಗಾಗಿ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲವನ್ನು ಕರಗಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಅನೇಕ ಮಂದಿಗೆ ತಿನ್ನುವಾಗ ಇತರರೊಂದಿಗೆ ಮಾತನಾಡುವ ಕೆಟ್ಟ ಅಭ್ಯಾಸ ಇರುತ್ತದೆ. ಆದರೆ ಈ ಅಭ್ಯಾಸದ ಪರಿಣಾಮವಾಗಿ ನಾವು ಗಾಳಿಯನ್ನು ಹಾದುಹೋಗುವ ಸಾಧ್ಯತೆಯಿದೆ. ಇದು ಹೊಟ್ಟೆಯ ಆಮ್ಲದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.