NEWS

IPL: ಸಹ ಮಾಲೀಕನ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಪ್ರೀತಿ ಜಿಂಟಾ; ಪಂಜಾಬ್​ ಕಿಂಗ್ಸ್​ ಫ್ರಾಂಚೈಸಿಯಲ್ಲಿ ಏನಾಯ್ತು?

ಪ್ರೀತಿ ಜಿಂಟಾ ಮುಂಬರುವ 2025ರ ಇಂಡಿಯನ್ ಪ್ರೀಮಿಯರ್​ ಲೀಗ್​ಗೆ (Indian Premier League) ಫ್ರಾಂಚೈಸಿಗಳು (Franchise) ಸಿದ್ಧವಾಗುತ್ತಿದ್ದು, ಮೆಗಾ ಹರಾಜಿಗೆ (Mega Auction)ತಮ್ಮ ರಣತಂತ್ರದನ್ನು ಹೆಣೆಯುತ್ತಿವೆ. ಬಿಸಿಸಿಐ (BCCI) ಕೂಡ ಹರಾಜಿಗೂ ಮೊದಲು ಟೂರ್ನಿಯ ನಿಯಮಗಳಲ್ಲಿನ ಕೆಲವು ಬದಲಾವಣೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಮೆಗಾ ಹರಾಜಿಗೂ ಮೊಲು ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂದು ಫ್ರಾಂಚೈಸಿಗಳು ಲೆಕ್ಕಾಚಾರದಲ್ಲಿ ತೊಡಿಗಿವೆ. ಆದ್ರೆ, ಪಂಜಾಬ್​ ಕಿಂಗ್ಸ್ (Punjab Kings) ತಂಡದಲ್ಲಿ ಮಾತ್ರ ಮಾಲೀಕರ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.​ ಕೋರ್ಟ್ ಮೆಟ್ಟಿಲೇರಿದ ಪ್ರೀತಿ ಜಿಂಟಾ ಬಾಲಿವುಡ್ ನಟಿ ಪ್ರೀತಿ ಜಿಂಟಾ, ಕೈಗಾರಿಕೋದ್ಯಮಿಗಳಾದ ಮೋಹಿತ್ ಬರ್ಮನ್ ಮತ್ತು ನೆಸ್ ವಾಡಿಯಾ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಸಹ-ಮಾಲೀಕರಾಗಿದ್ದಾರೆ. ಸಹ-ಮಾಲೀಕ ಮೋಹಿತ್ ಬರ್ಮನ್ ತನ್ನ ಷೇರುಗಳ ಒಂದು ಭಾಗವನ್ನು ಬೇರೆಯವರಿಗೆ ಮಾರಾಟ ಮಾಡುವುದನ್ನು ತಡೆಯುವಂತೆ ಕೋರಿ ಪ್ರೀತಿ ಜಿಂಟಾ ಚಂಡೀಗಢ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಕ್ರಿಕ್​ಬಜ್ ವರದಿ ಹೇಳಿದೆ. ಪ್ರೀತಿ ಜಿಂಟಾ ಪಿಬಿಕೆಎಸ್‌ನಲ್ಲಿ ಶೇಕಡಾ 23 ರಷ್ಟು ಪಾಲನ್ನು ಹೊಂದಿದ್ದರೆ ಮೋಹಿತ್ ಬರ್ಮನ್ 48 ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ. ನೆಸ್ ವಾಡಿಯಾ 23 ರಷ್ಟು ಪಾಲು ಹೊಂದಿದ್ರೆ, ಉಳಿದ ಷೇರುಗಳನ್ನು ಕರಣ್ ಪಾಲ್ ಹೊಂದಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಕ್ವೀನ್ ಮನು ಭಾಕರ್ ಮತ್ತು ಚಿನ್ನದ ಹುಡುಗ ನೀರಜ್ ಚೋಪ್ರಾ ಪೈಕಿ ಯಾರು ಶ್ರೀಮಂತರು? ಷೇರು ಮಾರಾಟಕ್ಕೆ ಮುಂದಾದ್ರ ಸಹ ಮಾಲೀಕ? ಪ್ರೀತಿ ಜಿಂಟಾ ಅವರ ನ್ಯಾಯಾಲಯದ ಮೇಲ್ಮನವಿಯಲ್ಲಿ ಬರ್ಮನ್ ಅವರು ತಮ್ಮ ಷೇರುಗಳ ಭಾಗವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ವರದಿಯನ್ನು ಉಲ್ಲೇಖಿಸಿದ್ದಾರೆ ಎಂದು ವರದಿ ಹೇಳಿದೆ. ಆದರೆ ಬರ್ಮನ್ ಈ ಊಹಾಪೋಹವನ್ನು ನಿರಾಕರಿಸಿದ್ದಾರೆ. ‘ನನ್ನ ಷೇರುಗಳನ್ನು ಮಾರಾಟ ಮಾಡಲು ಯಾವುದೇ ಯೋಜನೆ ಹಾಕಿಕೊಂಡಿಲ್ಲ’ ಎಂದು ಬರ್ಮನ್ ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ. ಆದ್ರೆ ಪಂಜಾಬ್ ಕಿಂಗ್ಸ್ ಈ ವಿಷಯದ ಬಗ್ಗೆ ಅಧಿಕೃತವಾಗಿ ಏನೂ ಮಾಹಿತಿ ನೀಡಿಲ್ಲ ಅಥವಾ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಮೇಲ್ಮನವಿಯಲ್ಲಿ ಏನಿದೆ? ‘ಬರ್ಮನ್ ಸುಮಾರು 48 ಪರ್ಸೆಂಟ್ ಷೇರುಗಳನ್ನು ಹೊಂದಿದ್ದಾರೆ ಮತ್ತು ನಿರ್ದೇಶಕರ ಮಂಡಳಿಯಲ್ಲಿದ್ದಾರೆ ಎಂದು ಪ್ರೀತಿ ಜಿಂಟಾ ಹೇಳಿದ್ದಾರೆ. ಆಕೆ ಮತ್ತು ಪ್ರತಿವಾದಿ ಮೋಹಿತ್ ಬರ್ಮನ್ ನಡುವಿನ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳ ದೃಷ್ಟಿಯಿಂದ ಮಧ್ಯಂತರ ಕ್ರಮಗಳು ಮತ್ತು ನಿರ್ದೇಶನವನ್ನು ಕೋರಿ ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆ-1996 ರ ಸೆಕ್ಷನ್ 9 ರ ಅಡಿಯಲ್ಲಿ ಅವರು ಅರ್ಜಿಯನ್ನು ಸಲ್ಲಿಸಿದ್ದಾರೆ’ ಎಂದು ಟ್ರಿಬ್ಯೂನ್‌ ವರದಿ ಮಾಡಿದೆ. ನಿಯಮಗಳು ಏನು ಹೇಳುತ್ತವೆ? ಯಾವುದೇ ಸಹ ಮಾಲೀಕರು IPL ತಂಡದಲ್ಲಿ ತಮ್ಮ ಪಾಲನ್ನು ಹಿಂತೆಗೆದುಕೊಳ್ಳಲು ಬಯಸಿದರೆ, ಅದನ್ನು ಮೊದಲು ಅಸ್ತಿತ್ವದಲ್ಲಿರುವ ಶೆರುದಾರರಿಗೆ ತಿಳಿಸಬೇಕು. ಅಗತ್ಯ ಅನುಮೋದನೆ ಪಡೆದ ನಂತರ ಮಾತ್ರ ಷೇರು ಮಾರಾಟ ಪ್ರಕ್ರಿಯೆಯನ್ನು ಮುಂದುವರಿಸಬಹುದು ಎಂದು ಕ್ರಿಕ್​ಬಜ್ ವರದಿ ಹೇಳಿದೆ. ಆಗಸ್ಟ್ 20 ರಂದು ವಿಚಾರಣೆ ಆಗಸ್ಟ್ 20 ರಂದು ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ವರದಿಯಾಗಿದ್ದು, ಮಾಲೀಕತ್ವದ ಹೋರಾಟದಲ್ಲಿ ಅಂತಿಮವಾಗಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇಂಡಿಯನ್ ಪ್ರೀಮಿಯ‌ರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್ ಅತ್ಯಂತ ಅಸ್ಥಿರ ತಂಡಗಳಲ್ಲಿ ಒಂದಾಗಿದೆ. ಆರಂಭದಿಂದಲೂ ಐಪಿಎಲ್ ಟ್ರೋಫಿಯನ್ನು ಗೆಲ್ಲದ ಮೂರು ತಂಡಗಳಲ್ಲಿಪಂಜಾಬ್ ತಂಡ ಕೂಡ ಒಂದು. ಟ್ರೆವರ್ ಬೇಲಿಸ್ ನಿರ್ಗಮನದ ನಂತರ ಪಂಜಾಬ್ ಕಿಂಗ್ಸ್‌ಗೆ ನೂತ ಕೋಚ್‌ನ ಅವಶ್ಯಕತೆಯಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.