NEWS

Air Show: ಚೆನ್ನೈ ಏರ್‌ ಶೋನಲ್ಲಿ ದುರಂತಕ್ಕೆ 3 ಮಂದಿ ಬಲಿ, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ! ಅಷ್ಟಕ್ಕೂ ಅಲ್ಲಿ ಆಗಿದ್ದೇನು?

ಸಾಂದರ್ಭಿಕ ಚಿತ್ರ ಚೆನ್ನೈ: ಭಾರತೀಯ ವಾಯುಪಡೆ (Indian Air force) 92 ವರ್ಷಗಳನ್ನು ಪೂರೈಸಿದೆ. ಇದರ ಹಿನ್ನೆಲೆ ಇಂದು (ಆಕ್ಟೋಬರ್ 6ರಂದು) ಚೆನ್ನೈನ (Chennai) ಮರೀನಾದಲ್ಲಿ (Marina Beach) ವಾಯುಪಡೆಯ ಏರ್‌ ಶೋ (Air Show) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವಾಯುಪಡೆಯ ಸಾಹಸ ಕಾರ್ಯಕ್ರಮದಲ್ಲಿ ಒಟ್ಟು 72 ವಿಮಾನಗಳು (Flights) ಭಾಗವಹಿಸಿ ವಿವಿಧ ಸಾಹಸ ಕಾರ್ಯಕ್ರಮಗಳನ್ನು ಪ್ರದರ್ಶಿಸಿದವು. ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾದ ಸಾಹಸ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಯಿತು. ಈ ಕಾರ್ಯಕ್ರಮವನ್ನು ವೀಕ್ಷಿಸಲು 15 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಅದರಲ್ಲಿ ಅವಘಡ ಕೂಡ ಸಂಭವಿಸಿದೆ. 15 ಲಕ್ಷಕ್ಕೂ ಅಧಿಕ ಮಂದಿ ಭಾಗಿ ಹೌದು, ಮರೀನಾ ಬೀಚ್‌ನಲ್ಲಿ ನಡೆದ ವಾಯುಪಡೆಯ ಏರ್‌ ಶೋ ಕಾರ್ಯಕ್ರಮದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಇದರೊಂದಿಗೆ ಇಂದಿನ ಈವೆಂಟ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ‘ವಿಶ್ವದ ಅತಿ ಹೆಚ್ಚು ಭಾಗವಹಿಸಿದ ಫೈಟರ್ ಅಡ್ವೆಂಚರ್ ಈವೆಂಟ್’ ಎಂದು ಸ್ಥಾನ ಪಡೆದಿದೆ. ಅಲ್ಲದೆ, ಈ ಸಾಹಸವನ್ನು ಕಣ್ತುಂಬಿಕೊಂಡು ಹಿಂದಿರುಗುತ್ತಿದ್ದ ಜನರಲ್ಲಿ ಭಾರೀ ನೂಕುನುಗ್ಗಲು ಮತ್ತು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡರು. ಕಾರ್ಯಕ್ರಮದ ಎರಡು ಅಥವಾ ಮೂರು ಗಂಟೆಗಳ ನಂತರ, ಚೆನ್ನೈನ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಅನ್ನು ತೆರವುಗೊಳಿಸಲಾಯಿತು. ಅಲ್ಲದೆ, ರೈಲು ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ಬಸ್‌ಗಳು ಇತ್ಯಾದಿಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಮೂವರ ದುರ್ಮರಣ ಇಂದು ಭಾನುವಾರ ರಜೆ ಹಾಗೂ ಚೆನ್ನೈನಲ್ಲಿ ನಡೆದ ಅತಿ ದೊಡ್ಡ ಏರ್ ಶೋ ಎಂಬ ಕಾರಣಕ್ಕೆ ಬೆಳಗ್ಗೆಯಿಂದಲೇ ಮರೀನಾದಲ್ಲಿ ಜನರು ತಮ್ಮ ಮಕ್ಕಳು ಹಾಗೂ ವೃದ್ಧರೊಂದಿಗೆ ಮನೆಯಲ್ಲಿ ಸಾಹಸ ವೀಕ್ಷಿಸಲು ನೆರೆದಿದ್ದರು. ಇದರಿಂದಾಗಿ ಜನಸಂದಣಿ ಹೆಚ್ಚಾಗಿತ್ತು. ಈ ವೇಳೆ ಬಿಸಿಲಿನ ಝಳ ಹೆಚ್ಚಿದ ಕಾರಣದಿಂದಾಗಿ ಸಾಹಸ ಕಾರ್ಯಕ್ರಮ ವೀಕ್ಷಿಸಿದ ಕೆಲವರು ತಲೆ ಸುತ್ತಿ ಬಿದ್ದಿದ್ದಾರೆ. ಪ್ರಜ್ಞೆ ತಪ್ಪಿದವರನ್ನು ಕೂಡಲೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆನ್ನೈನ ಕೊರುಕುಪ್ಪೆಟ್ ಮೂಲದ ಜಾನ್ (ವಯಸ್ಸು 60) ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪೊಲೀಸರಿಂದ ಪ್ರಕರಣ ದಾಖಲು ಅದೇ ರೀತಿ ಐಎನ್‌ಎಸ್ ಬಳಿ ನಿಂತು ಸಾಹಸ ಕಣ್ತುಂಬಿಕೊಂಡ ತಿರುವೊಟ್ಟಿಯೂರಿನ ಕಾರ್ತಿಕೇಯನ್ (34) ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೂಡ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಇವರ ಜೊತೆ ಈ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಇನ್ನೋರ್ವರು ಕೂಡ ಸಾವನ್ನಪ್ಪಿದ್ದಾರೆ. ಆ ಮೂಲಕ ಈ ಸಾಹಸ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಮೂವರು ಸಾವನ್ನಪ್ಪಿದ್ದಾರೆ. ಬಳಿಕ ಪೊಲೀಸರು ಅವರ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲಿ ನಡೆದದ್ದೇನು? ಚೆನ್ನೈನಲ್ಲಿ ತಾಪಮಾನ ಹೆಚ್ಚಾಗಿತ್ತು. ಮಾತ್ರವಲ್ಲದೆ 15 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರಿಂದ ಇಂತಹ ವಾತಾವರಣದಲ್ಲಿ ವೈಮಾನಿಕ ಸಾಹಸ ಕಾರ್ಯಕ್ರಮ ನೋಡಲು ಬಂದವರು ವಿಪರೀತ ಸೆಖೆಯಿಂದ ಬಳಲಿದರು. ಅಲ್ಲದೇ 230ಕ್ಕೂ ಹೆಚ್ಚು ಮಂದಿ ಬಿಸಿಲ ತಾಪಕ್ಕೆ ಮೂರ್ಛೆ ಹೋದರು. ಈ ಪೈಕಿ 90 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಾವನ್ನಪ್ಪಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.