NEWS

Jasprit Bumrah: ಧೋನಿ, ರೋಹಿತ್, ಕೋಹ್ಲಿ ಯಾರು ಅಲ್ಲ! ಬುಮ್ರಾ ಪ್ರಕಾರ ಇವರೇ ಟೀಂ ಇಂಡಿಯಾದ ಬೆಸ್ಟ್‌ ಕ್ಯಾಪ್ಟನ್?

ಸಾಂದರ್ಭಿಕ ಚಿತ್ರ ಭಾರತ ಕ್ರಿಕೆಟ್ ತಂಡದ ವೇಗದ ಬೌಲಿಂಗ್‌ನ ಶಕ್ತಿಯಾಗಿರುವ ಜಸ್ಪ್ರಿತ್ ಬುಮ್ರಾ (Jasprit bumrah) ಅವರು ತಮ್ಮ ಶ್ರೇಷ್ಠ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ನಲ್ಲಿ 2016 ರಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡದಲ್ಲಿ ಸ್ಥಾನ ಪಡೆದ ಬಳಿಕ ವಿಶಿಷ್ಟ ಶೈಲಿಯ ಬೌಲರ್ ಎಂ.ಎಸ್.ಧೋನಿ (M.S.Dhoni) ಅವರ ನಾಯಕತ್ವದ ಸಂದರ್ಭದಲ್ಲಿ ಟೀ ಇಂಡಿಯಾ (Team India)ಗೆ ಪ್ರವೇಶ ಪಡೆದರು. ಬಳಿಕ ಅವರು ವಿರಾಟ್ ಕೋಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಭಾರತದ ಪರವಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ನಾಯಕ ಯಾರೇ ಆದ್ರೂ ಗೆಲುವಿನ ರುವಾರಿ ಬುಮ್ರಾ! ಬುಮ್ರಾ ಅವರು ಭಾರತಕ್ಕಾಗಿ ಆಡಿದ ಕೆಲವು ಅತ್ಯುತ್ತಮ ನಾಯಕರ ಅಡಿಯಲ್ಲಿ ಭಾರತ ತಂಡದ ಪರವಾಗಿ ಆಡಿದ್ದಾರೆ. ವೈಟ್ ಬಾಲ್ ಮಾದರಿಯ ಎಲ್ಲಾ ICC ಟೂರ್ನಿಗಳನ್ನು ಗೆದ್ದಿರುವ ಏಕೈಕ ನಾಯಕ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಅವರು ವಿರಾಟ್‌ ಕೋಹ್ಲಿಯವರ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ದಿಗ್ವಿಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಬಳಿಕ ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟಿ-20 ವಿಶ್ವಕಪ್ ಗೆದ್ದಾಗ ಆ ಗೆಲುವಿನ ಹಿಂದಿನ ಪ್ರಮುಖ ರುವಾರಿ ಆದವರು ಇದೇ ಜಸ್ಪ್ರಿತ್ ಬುಮ್ರಾ. ಅವರು ಟಿ-20 ವಿಶ್ವಕಪ್‌ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ನಾನೇ ಅತ್ಯುತ್ತಮ ನಾಯಕ! ನಿಮ್ಮ ಪ್ರಕಾರ “ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕನ ಹೆಸರು ಹೇಳಿ ಎಂದಾಗ” ಬುಮ್ರಾ ತಮ್ಮದೇ ಹೆಸರು ಹೇಳುವ ಮೂಲಕ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದಾರೆ. ಮುಂದುವರೆದು ಮಾತನಾಡಿದ ಅವರು “ನೋಡಿ ನನ್ನ ನೆಚ್ಚಿನ ನಾಯಕ ನಾನು, ಏಕೆಂದರೆ ನಾನು ಕೆಲವು ಪಂದ್ಯಗಳಲ್ಲಿ ನಾಯಕನಾಗಿದ್ದೇನೆ. ನಿಸ್ಸಂಶಯವಾಗಿ ಭಾರತದ ಪರ ಆಡಿರುವವರಲ್ಲಿ ಕೆಲವು ಶ್ರೇಷ್ಠ ನಾಯಕರಿದ್ದಾರೆ. ಆದರೆ ನಾನು ನನ್ನ ನೆಚ್ಚಿನ ನಾಯಕ ಎಂದು ನನ್ನ ಹೆಸರನ್ನೇ ತೆಗೆದುಕೊಳ್ಳುತ್ತೇನೆ” ಎಂದು ಬುಮ್ರಾ ಇಂಡಿಯನ್ ಎಕ್ಸ್‌ಪ್ರೆಸ್‌ ಗೆ ತಿಳಿಸಿದ್ದಾರೆ. ಕೆಲವು ಪಂದ್ಯಗಳಲ್ಲಿ ನಾಯಕನಾಗಿ ಸಾಮರ್ಥ್ಯ ಪ್ರದರ್ಶಿಸಿರುವ ಬುಮ್ರಾ ಬುಮ್ರಾ ಈಗಾಗಲೇ ಟೆಸ್ಟ್ ಮತ್ತು ಟಿ-20 ಐ ಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಮತ್ತು ಐರ್ಲೆಂಡ್ ವಿರುದ್ಧ ಎರಡು ಟಿ-20 ಐ ಪಂದ್ಯಗಳಲ್ಲಿ ನಾಯಕನಾಗಿ ತನ್ನ ಸಾಮರ್ಥ್ಯ ಏನೆಂಬುದನ್ನು ಪ್ರದರ್ಶಸಿದ್ದಾರೆ. ಬ್ಯಾಟರ್‌ಗಳಿಂತ ಬೌಲರ್‌ಗಳೇ ಬುದ್ಧಿವಂತರು ಬೌಲರ್‌ಗಳಿಗಿಂತ ಬ್ಯಾಟರ್‌ಗಳಿಗೆ ನಾಯಕತ್ವಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಏಕೆ ಎಂಬ ಪ್ರಶ್ನೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ, “ಏಕೆಂದರೆ ಬೌಲರ್‌ಗಳು ಕಠಿಣ ಕೆಲಸ ಮಾಡುತ್ತಿದ್ದಾರೆ. ಅವರು ಬ್ಯಾಟ್‌ನ ಹಿಂದೆ ಅಡಗಿಲ್ಲ, ಅವರು ಫ್ಲಾಟ್ ವಿಕೆಟ್‌ನ ಹಿಂದೆ ಅಡಗಿಲ್ಲ. ನೀವು ಪಂದ್ಯವನ್ನು ಕಳೆದುಕೊಳ್ಳುವ ಸಂದರ್ಭದಲ್ಲಿಯೂ ಬೌಲರ್‌ಗಳು ಮರಳಿ ಆ ಪಂದ್ಯವನ್ನು ವಾಪಾಸ್ ತರುವುದನ್ನು ನಾನು ತುಂಬಾ ಹೆಮ್ಮೆಪಡುತ್ತೇನೆ. ಬೌಲರ್‌ಗಳು ತುಂಬಾ ಕಟ್ಟುನಿಟ್ಟಾಗಿ ತಮ್ಮ ಕಾರ್ಯವನ್ನು ನಿರ್ವಹಿಸುವುದನ್ನು ನಾನು ನೋಡಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಬೌಲರ್‌ಗಳು ಕೂಡ ಬುದ್ಧಿವಂತರೆ” ಎಂದು ಬುಮ್ರಾ ಉತ್ತರಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.