NEWS

Morning Breakfast: ಈ ಚಪಾತಿಗೆ ಸೈಡ್​ ಡಿಶ್​ ಬೇಡ್ವೇ ಬೇಡ; ಮಕ್ಕಳು ಹಾಗೇ ಬಾಯಿ ಚಪ್ಪರಿಸಿಕೊಂಡು ತಿಂತಾರೆ!

ಸಾಂದರ್ಭಿಕ ಚಿತ್ರ ಸಾಮಾನ್ಯವಾಗಿ ಮನೆಗಳಲ್ಲಿ ತಿಂಡಿಗೆ ಚಪಾತಿ (Chapati) ಮತ್ತು ರೊಟ್ಟಿ (Rotti) ಮಾಡುತ್ತಲೇ ಇರುತ್ತಾರೆ. ಅನೇಕ ಮನೆಗಳಲ್ಲಿ ವಿಶೇಷವಾಗಿ ಮಧುಮೇಹಿಗಳು ಇರುವ ಮನೆಯಲ್ಲಿ ಚಪಾತಿ ಹಾಗೂ ರೊಟ್ಟಿಯಂತಹ ತಿಂಡಿಗಳನ್ನು ಬೆಳಗಿನ ಉಪಹಾರ (Morning Breakfast) ಹಾಗೂ ರಾತ್ರಿ ಊಟಕ್ಕೆ ಮಾಡಲಾಗುತ್ತಲೇ ಇರುತ್ತದೆ. ಆದರೆ ಒಂದೇ ರೀತಿಯ ಚಪಾತಿ ಹಾಗೂ ರೊಟ್ಟಿ ತಿಂದು ನಿಮಗೆ ಸಾಕಾಗಿದ್ಯಾ? ನಿಮ್ಮ ಮಕ್ಕಳ ಚಪಾತಿ ಹಾಗೂ ರೊಟ್ಟಿ ಹೆಸರು ಕೇಳಿದ್ರೆ ರಾಗ ಎಳೆಯುತ್ತಾರಾ? ಡೋಂಟ್​ವರಿ ಈಗ ಮಾಡೋ ಚಪಾತಿಯನ್ನೇ ಕೊಂಚ ಡಿಫರೆಂಟ್​ ಹಾಗೂ ಟೇಸ್ಟಿಯಾಗಿ ಮಾಡಿಕೊಡಿ. ಅದ್ಹೇಗೆ ಅಂತ ಯೋಚಿಸ್ತಿದ್ದೀರಾ? ನಿಮಗೆ ಸ್ಪೆಷನ್​ ರೆಸಿಪಿ ನಾವು ಕೊಡ್ತೀವಿ ನೋಡಿ. ನಾವು ಹೇಳಿದಂತೆ ನೀವು ಚಪಾತಿ ಮಾಡಿದ್ರೇ ಇದಕ್ಕೆ ಚಟ್ನಿ, ಪಲ್ಯ ಯಾವುದೇ ಸೈಡ್​ ಡಿಶ್​ ಇಲ್ಲದೇ ಕೂಡ ತಿನ್ನಬಹುದು. ಹಾಗಾದ್ರೆ ತಡ ಯಾಕೆ ಈಗ್ಲೇ ಮಸಾಲೆ ಚಪಾತಿ ಮಾಡಿ ತಿಂದು ಆನಂದಿಸಿ. ಮಸಾಲೆ ಚಪಾತಿ ಮಾಡಲು ಬೇಕಿರೋ ಸಾಮಾಗ್ರಿಗಳು ಮಸಾಲೆ ಚಪಾತಿ ಮಾಡುವ ವಿಧಾನ ಕನ್ನಡ ಸುದ್ದಿ / ನ್ಯೂಸ್ / ಲೈಫ್ ಸ್ಟೈಲ್ / Morning Breakfast: ಈ ಚಪಾತಿಗೆ ಸೈಡ್​ ಡಿಶ್​ ಬೇಡ್ವೇ ಬೇಡ; ಮಕ್ಕಳು ಹಾಗೇ ಬಾಯಿ ಚಪ್ಪರಿಸಿಕೊಂಡು ತಿಂತಾರೆ! Morning Breakfast: ಈ ಚಪಾತಿಗೆ ಸೈಡ್​ ಡಿಶ್​ ಬೇಡ್ವೇ ಬೇಡ; ಮಕ್ಕಳು ಹಾಗೇ ಬಾಯಿ ಚಪ್ಪರಿಸಿಕೊಂಡು ತಿಂತಾರೆ! ಸಾಂದರ್ಭಿಕ ಚಿತ್ರ ಒಂದೇ ರೀತಿಯ ಚಪಾತಿ ಹಾಗೂ ರೊಟ್ಟಿ ತಿಂದು ನಿಮಗೆ ಸಾಕಾಗಿದ್ಯಾ? ನಿಮ್ಮ ಮಕ್ಕಳ ಚಪಾತಿ ಹಾಗೂ ರೊಟ್ಟಿ ಹೆಸರು ಕೇಳಿದ್ರೆ ರಾಗ ಎಳೆಯುತ್ತಾರಾ? ಡೋಂಟ್​ವರಿ ಈಗ ಮಾಡೋ ಚಪಾತಿಯನ್ನೇ ಕೊಂಚ ಡಿಫರೆಂಟ್​ ಹಾಗೂ ಟೇಸ್ಟಿಯಾಗಿ ಮಾಡಿಕೊಡಿ. ಅದ್ಹೇಗೆ ಅಂತ ಯೋಚಿಸ್ತಿದ್ದೀರಾ? ನಿಮಗೆ ಸ್ಪೆಷನ್​ ರೆಸಿಪಿ ನಾವು ಕೊಡ್ತೀವಿ ನೋಡಿ. ಮುಂದೆ ಓದಿ … 3-MIN READ Kannada Last Updated : August 25, 2024, 6:25 am IST Whatsapp Facebook Telegram Twitter Follow us on Follow us on google news Published By : Monika N Written By : Poornima Hegde ಸಂಬಂಧಿತ ಸುದ್ದಿ ಸಾಮಾನ್ಯವಾಗಿ ಮನೆಗಳಲ್ಲಿ ತಿಂಡಿಗೆ ಚಪಾತಿ (Chapati) ಮತ್ತು ರೊಟ್ಟಿ (Rotti) ಮಾಡುತ್ತಲೇ ಇರುತ್ತಾರೆ. ಅನೇಕ ಮನೆಗಳಲ್ಲಿ ವಿಶೇಷವಾಗಿ ಮಧುಮೇಹಿಗಳು ಇರುವ ಮನೆಯಲ್ಲಿ ಚಪಾತಿ ಹಾಗೂ ರೊಟ್ಟಿಯಂತಹ ತಿಂಡಿಗಳನ್ನು ಬೆಳಗಿನ ಉಪಹಾರ (Morning Breakfast) ಹಾಗೂ ರಾತ್ರಿ ಊಟಕ್ಕೆ ಮಾಡಲಾಗುತ್ತಲೇ ಇರುತ್ತದೆ. ಆದರೆ ಒಂದೇ ರೀತಿಯ ಚಪಾತಿ ಹಾಗೂ ರೊಟ್ಟಿ ತಿಂದು ನಿಮಗೆ ಸಾಕಾಗಿದ್ಯಾ? ನಿಮ್ಮ ಮಕ್ಕಳ ಚಪಾತಿ ಹಾಗೂ ರೊಟ್ಟಿ ಹೆಸರು ಕೇಳಿದ್ರೆ ರಾಗ ಎಳೆಯುತ್ತಾರಾ? ಡೋಂಟ್​ವರಿ ಈಗ ಮಾಡೋ ಚಪಾತಿಯನ್ನೇ ಕೊಂಚ ಡಿಫರೆಂಟ್​ ಹಾಗೂ ಟೇಸ್ಟಿಯಾಗಿ ಮಾಡಿಕೊಡಿ. ಅದ್ಹೇಗೆ ಅಂತ ಯೋಚಿಸ್ತಿದ್ದೀರಾ? ನಿಮಗೆ ಸ್ಪೆಷನ್​ ರೆಸಿಪಿ ನಾವು ಕೊಡ್ತೀವಿ ನೋಡಿ. ನಾವು ಹೇಳಿದಂತೆ ನೀವು ಚಪಾತಿ ಮಾಡಿದ್ರೇ ಇದಕ್ಕೆ ಚಟ್ನಿ, ಪಲ್ಯ ಯಾವುದೇ ಸೈಡ್​ ಡಿಶ್​ ಇಲ್ಲದೇ ಕೂಡ ತಿನ್ನಬಹುದು. ಹಾಗಾದ್ರೆ ತಡ ಯಾಕೆ ಈಗ್ಲೇ ಮಸಾಲೆ ಚಪಾತಿ ಮಾಡಿ ತಿಂದು ಆನಂದಿಸಿ. ಜಾಹೀರಾತು ಸಾಂದರ್ಭಿಕ ಚಿತ್ರ ಮಸಾಲೆ ಚಪಾತಿ ಮಾಡಲು ಬೇಕಿರೋ ಸಾಮಾಗ್ರಿಗಳು ಗೋಧಿಹಿಟ್ಟು - 2 ಕಪ್ ಕಡಲೆಹಿಟ್ಟು - 1 ಕಪ್ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ - 1 ಕಪ್ ಚಿಕ್ಕದಾಗಿ ಹೆಚ್ಚಿದ ಟೊಮೆಟೋ - 1 ಕಪ್ ಹೆಚ್ಚಿದ ಕೊತ್ತಂಬರಿ ಸೊಪ್ಪು - 4 ಸ್ಪೂನ್ ಹೆಚ್ಚಿದ ಹಸಿಮೆಣಸಿಕ ಕಾಯಿ - 2-3 ಧನಿಯಾ ಪೌಡರ್ - 1 ಸ್ಪೂನ್ ಜೀರಿಗೆ ಪುಡಿ - 1 ಸ್ಪೂನ್ ಖಾರದ ಪುಡಿ - 1 ಸ್ಪೂನ್ ಉಪ್ಪು - ರುಚಿಗೆ ತಕ್ಕಷ್ಟು ಚಪಾತಿ ಹಿಟ್ಟು ಕಲೆಸಲು - ಸ್ವಲ್ಪ ಎಣ್ಣೆ ಬೇಯಿಸಲು ಅಗತ್ಯವಿರುವಷ್ಟು - ಎಣ್ಣೆ ಸಾಂದರ್ಭಿಕ ಚಿತ್ರ ಮಸಾಲೆ ಚಪಾತಿ ಮಾಡುವ ವಿಧಾನ ಒಂದು ಬಾಣಲೆಗೆ ನಾಲ್ಕು ಸ್ಪೂನ್ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಟೊಮೆಟೋ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಈರುಳ್ಳಿ ಹೊಂಬಣ್ಣಕ್ಕೆ ತಿರುಗಿ, ಟೊಮೆಟೋ ಮೆತ್ತಗಾದ ಮೇಲೆ ಗ್ಯಾಸ್ ಆಫ್ ಮಾಡಿ. ಈ ಮಿಶ್ರಣ ತಣ್ಣಗಾದ ಬಳಿಕ ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಗೋಧಿಹಿಟ್ಟು, ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ನಾದಿ ಕಲೆಸಿಕೊಳ್ಳಿ. ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ ಕಮಲದ ಬೀಜ ಇನ್ನಷ್ಟು ಸುದ್ದಿ… ಎಷ್ಟು ಚೆನ್ನಾಗಿ ನಾದುತ್ತಿರೋ ಅಷ್ಟು ಮೆತ್ತಗಾಗುತ್ತದೆ ಮಸಾಲೆ ಚಪಾತಿ. ಬಳಿಕ ಒಂದು ಲಿಂಬೆ ಗಾತ್ರದ ಹಿಟ್ಟಿನ ಉಂಡೆ ತೆಗೆದುಕೊಂಡು ಚಿಕ್ಕದಾಗಿ ಲಟ್ಟಿಸಿ ಬಳಿಕ ಎಣ್ಣೆ ಲೇಪಿಸಿ ಮತ್ತೆ ಮಡಚಿ ಒರೆದು ಸಣ್ಣ ಉರಿಯಲ್ಲಿ ಬೇಯಿಸಿ. ಈಗ ರುಚಿಯಾದ ಮಸಾಲೆ ಚಪಾತಿ ಸವಿಯಲು ಸಿದ್ಧ. ಇದನ್ನು ನೀವು ಮಕ್ಕಳ ಲಂಚ್ ಬಾಕ್ಸ್ ಅಥವಾ ಟ್ರಿಪ್ ಗಳಿಗೆ ಹೋಗುವಾಗಲೂ ಬಾಕ್ಸ್ ಗೆ ಬಳಸಬಹುದು. ಇದಕ್ಕೆ ಚಟ್ನಿ, ಪಲ್ಯ ಬೇಕೆಂದಿಲ್ಲ. ಕೇವಲ ಬೆಣ್ಣೆ ಜೊತೆಗೂ ಸವಿಯಬಹುದು. Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: breakfast , chapati , Food , Recipe First Published : August 25, 2024, 6:25 am IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.