NEWS

IND vs BAN: ಬಾಂಗ್ಲಾ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ! ಸೇನ್ಷೇಷನ್ ವೇಗಿ ಸೇರಿ ಇಬ್ಬರಿಗೆ ಪದಾರ್ಪಣೆ ಭಾಗ್ಯ

ಭಾರತ vs ಬಾಂಗ್ಲಾದೇಶ ಟಿ20 ಗ್ವಾಲಿಯರ್: ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಗ್ವಾಲಿಯರ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ಪರ ಇಬ್ಬರು ಪದಾರ್ಪಣೆ ಮಾಡುತ್ತಿದ್ದಾರೆ. ಅನುಭವಿಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾಗೆ ನಿತೀಶ್ ಕುಮಾರ್ ರೆಡ್ಡಿ ಹಾಗೂ ಐಪಿಎಲ್​ನಲ್ಲಿ 150ರ ಸೆನ್ಷೇಷನ್​ ಕ್ರಿಯೇಟ್ ಮಾಡಿದ ವೇಗಿ ಮಯಾಂಕ್ ಯಾದವ್​ಗೂ ಚಾನ್ಸ್​ ಸಿಕ್ಕಿದೆ. ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-0ಯಲ್ಲಿ ಗೆದ್ದಿತ್ತು. ಇದೀಗ ಟಿ20 ಸರಣಿಗೆ ಟೆಸ್ಟ್​ನಲ್ಲಿದ್ದ ಎಲ್ಲಾ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಹಾಗಾಗಿ ಯುವ ಆಟಗಾರರಿಗೆ ಚಾನ್ಸ್ ನೀಡಿದೆ. ಐಪಿಎಲ್​ನಲ್ಲಿ ಮಯಾಂಕ್ ಯಾದವ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅದ್ಬುತ ಪ್ರದರ್ಶನ ತೋರಿದ್ದರು. ಹಾಗಾಗಿ ಅವರಿಗೆ ಈ ಸರಣಿಯಲ್ಲಿ ಅವಕಾಶ ನೀಡಲಾಗಿತ್ತು. ಇದೀಗ ಕ್ಯಾಪ್ ಕೂಡ ಸಿಕ್ಕಿದೆ. ಇನ್ನು ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೆ ಕಮ್​ಬ್ಯಾಕ್ ಮಾಡಿದ್ದಾರೆ. ಸಂಜು ಸಾಮ್ಸನ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯ ಕಮ್​ಬ್ಯಾಕ್ ಮಾಡಿದ್ದಾರೆ. ಸ್ಪಿನ್ನರ್ ವಿಭಾಗದಲ್ಲಿ ರವಿ ಬಿಷ್ಣೋಯ್​ ಬದಲಿಗೆ ವರುಣ್ ಚಕ್ರವರ್ತಿಗೆ ಚಾನ್ಸ್ ನೀಡಲಾಗಿದೆ. ವಾಷಿಂಗ್ಟನ್ ಸುಂದರ್ ತಮ್ಮ ಸ್ಥಾನವನ್ನ ಉಳಿಸಿಕೊಂಡಿದ್ದಾರೆ. ಅರ್ಶದೀಪ್ ಸಿಂಗ್ ವೇಗಿಗಳ ವಿಭಾಗವನ್ನ ಮುನ್ನಡೆಸಲಿದ್ದಾರೆ. ಮಯಾಂಕ್ ಯಾದವ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಒಂದಷ್ಟು ಓವರ್​ಗಳನ್ನ ಬೌಲಿಂಗ್ ಮಾಡುವ ಅವಕಾಶವಿದೆ. ಬಾಂಗ್ಲಾದೇಶ : ಲಿಟ್ಟನ್ ದಾಸ್(ವಿಕೆಟ್ ಕೀಪರ್), ನಜ್ಮುಲ್ ಹೊಸೈನ್ ಶಾಂಟೊ(ನಾಯಕ), ಪರ್ವೇಜ್ ಹೊಸೈನ್ ಎಮನ್, ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ಜೇಕರ್ ಅಲಿ, ಮೆಹಿದಿ ಹಸನ್ ಮಿರಾಜ್, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೀ), ಸೂರ್ಯಕುಮಾರ್ ಯಾದವ್(ನಾಯಕ), ನಿತೀಶ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್ ಕನ್ನಡ ಸುದ್ದಿ / ನ್ಯೂಸ್ / ಕ್ರೀಡೆ / IND vs BAN: ಬಾಂಗ್ಲಾ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ! ಸೇನ್ಷೇಷನ್ ವೇಗಿ ಸೇರಿ ಇಬ್ಬರಿಗೆ ಪದಾರ್ಪಣೆ ಭಾಗ್ಯ IND vs BAN: ಬಾಂಗ್ಲಾ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ! ಸೇನ್ಷೇಷನ್ ವೇಗಿ ಸೇರಿ ಇಬ್ಬರಿಗೆ ಪದಾರ್ಪಣೆ ಭಾಗ್ಯ ಭಾರತ vs ಬಾಂಗ್ಲಾದೇಶ ಟಿ20 ಗ್ವಾಲಿಯರ್​ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಇಬ್ಬರು ಯುವ ಕ್ರಿಕೆಟಿಗರು ಪದಾರ್ಪಣೆ ಮಾಡುತ್ತಿದ್ದಾರೆ. ಮುಂದೆ ಓದಿ … 4-MIN READ Kannada Last Updated : October 6, 2024, 6:54 pm IST Whatsapp Facebook Telegram Twitter Follow us on Follow us on google news Published By : Rajesha M B ಸಂಬಂಧಿತ ಸುದ್ದಿ ಗ್ವಾಲಿಯರ್: ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಗ್ವಾಲಿಯರ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ಪರ ಇಬ್ಬರು ಪದಾರ್ಪಣೆ ಮಾಡುತ್ತಿದ್ದಾರೆ. ಅನುಭವಿಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾಗೆ ನಿತೀಶ್ ಕುಮಾರ್ ರೆಡ್ಡಿ ಹಾಗೂ ಐಪಿಎಲ್​ನಲ್ಲಿ 150ರ ಸೆನ್ಷೇಷನ್​ ಕ್ರಿಯೇಟ್ ಮಾಡಿದ ವೇಗಿ ಮಯಾಂಕ್ ಯಾದವ್​ಗೂ ಚಾನ್ಸ್​ ಸಿಕ್ಕಿದೆ. ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-0ಯಲ್ಲಿ ಗೆದ್ದಿತ್ತು. ಇದೀಗ ಟಿ20 ಸರಣಿಗೆ ಟೆಸ್ಟ್​ನಲ್ಲಿದ್ದ ಎಲ್ಲಾ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಹಾಗಾಗಿ ಯುವ ಆಟಗಾರರಿಗೆ ಚಾನ್ಸ್ ನೀಡಿದೆ. ಐಪಿಎಲ್​ನಲ್ಲಿ ಮಯಾಂಕ್ ಯಾದವ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅದ್ಬುತ ಪ್ರದರ್ಶನ ತೋರಿದ್ದರು. ಹಾಗಾಗಿ ಅವರಿಗೆ ಈ ಸರಣಿಯಲ್ಲಿ ಅವಕಾಶ ನೀಡಲಾಗಿತ್ತು. ಇದೀಗ ಕ್ಯಾಪ್ ಕೂಡ ಸಿಕ್ಕಿದೆ. ಜಾಹೀರಾತು ಇನ್ನು ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೆ ಕಮ್​ಬ್ಯಾಕ್ ಮಾಡಿದ್ದಾರೆ. ಸಂಜು ಸಾಮ್ಸನ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯ ಕಮ್​ಬ್ಯಾಕ್ ಮಾಡಿದ್ದಾರೆ. ಸ್ಪಿನ್ನರ್ ವಿಭಾಗದಲ್ಲಿ ರವಿ ಬಿಷ್ಣೋಯ್​ ಬದಲಿಗೆ ವರುಣ್ ಚಕ್ರವರ್ತಿಗೆ ಚಾನ್ಸ್ ನೀಡಲಾಗಿದೆ. ವಾಷಿಂಗ್ಟನ್ ಸುಂದರ್ ತಮ್ಮ ಸ್ಥಾನವನ್ನ ಉಳಿಸಿಕೊಂಡಿದ್ದಾರೆ. ಅರ್ಶದೀಪ್ ಸಿಂಗ್ ವೇಗಿಗಳ ವಿಭಾಗವನ್ನ ಮುನ್ನಡೆಸಲಿದ್ದಾರೆ. ಮಯಾಂಕ್ ಯಾದವ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಒಂದಷ್ಟು ಓವರ್​ಗಳನ್ನ ಬೌಲಿಂಗ್ ಮಾಡುವ ಅವಕಾಶವಿದೆ. ಜಾಹೀರಾತು ಬಾಂಗ್ಲಾದೇಶ : ಲಿಟ್ಟನ್ ದಾಸ್(ವಿಕೆಟ್ ಕೀಪರ್), ನಜ್ಮುಲ್ ಹೊಸೈನ್ ಶಾಂಟೊ(ನಾಯಕ), ಪರ್ವೇಜ್ ಹೊಸೈನ್ ಎಮನ್, ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ಜೇಕರ್ ಅಲಿ, ಮೆಹಿದಿ ಹಸನ್ ಮಿರಾಜ್, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೀ), ಸೂರ್ಯಕುಮಾರ್ ಯಾದವ್(ನಾಯಕ), ನಿತೀಶ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್ Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: india vs bangladesh , Team India First Published : October 6, 2024, 6:54 pm IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.