NEWS

Satish Jarkiholi: 'ಮುಂದಿನ ಸಿಎಂ ಸತೀಶ್ ಜಾರಕಿಹೊಳಿ'! ದಲಿತ ಸಿಎಂ ಕೂಗಿನ ನಡುವೆ ಜಾರಕಿಹೊಳಿ-ಪರಮೇಶ್ವರ್ 'ರಹಸ್ಯ' ಚರ್ಚೆ!

ಸತೀಶ್ ಜಾರಕಿಹೊಳಿ ತುಮಕೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧದ ಮುಡಾ ಹಗರಣ (Muda Scam) ಸದ್ದು ಮಾಡುತ್ತಿದ್ದಂತೆ ಇದೀಗ ಮುಂದಿನ ಸಿಎಂ ನಾನೇ ಎಂದು ಹಲವರು ಹೇಳಿಕೆ ನೀಡುತ್ತಿದ್ದಾರೆ. ಈ ಸಂಬಂಧ ಈಗ ತುಮಕೂರಿನಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ (DR G Parameshwar) ಹಾಗೂ ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಅವರ ಭೇಟಿ ಭಾರೀ ಕುತೂಹಲ ಮೂಡಿಸುತ್ತಿದೆ. ರಾಜ್ಯದ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ರಾಜ್ಯದ ಮುಂದಿನ ಸಿಎಂ ಜಾರಕಿಹೊಳಿ? ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಅವರ ಭೇಟಿಯು ಹಲವು ಚರ್ಚೆಗೆ ಕಾರಣವಾಗುತ್ತಿದೆ. ಮರಳೂರುದಿಣ್ಣೆಯಲ್ಲಿರುವ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಮುಖಾಮುಖಿ ಭೇಟಿಯಾದ ಇವರು ಪರಸ್ಪರ ಚರ್ಚೆ ನಡೆಸಿದ್ದಾರೆ. ಇವರಿಬ್ಬರ ಮಾತುಗಳು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ರಾಜ್ಯದ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಗುತ್ತಾರೆ ಎಂಬ ಮಾತು ಎಲ್ಲಡೆ ಹಬ್ಬುತ್ತಿದೆ. ಸಿಎಂಗೆ ರಾಜೀನಾಮೆ ನೀಡಬೇಡಿ ಎಂದಿದ್ದೇವೆ ಇನ್ನು ಪರಮೇಶ್ವರ್ ಭೇಟಿ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿದ್ದು, ನಾನು ಅವರನ್ನು ಭೇಟಿ ಆಗಿದ್ದೀವಿ. ಅವರ ಜೊತೆ ಊಟ ಮಾಡಿದ್ದೇನೆ ಅಷ್ಟೇ. ತುಮಕೂರಿನಲ್ಲಿ ನಂದು ಬೇರೆ ಕಾರ್ಯಕ್ರಮ ಇತ್ತು. ಹಾಗಾಗಿ ಇಲ್ಲಿಗೆ ಬಂದಿದ್ದೆ. ಆ ಸಮಯದಲ್ಲಿ ಪರಮೇಶ್ವರ್ ಸಾಹೇಬ್ರನ್ನಾ ನೋಡ್ಕೊಂಡ್ ಹೋಗೋಕೆ ಬಂದಿದ್ದೆ. ನಮ್ಮ ಮಧ್ಯೆ ಬೇರೆ ಏನು ಚರ್ಚೆ ಆಗಲ್ಲಿ. ನಾವು ಸಿಎಂಗೆ ರಾಜೀನಾಮೆ ಕೊಡ್ಬೇಡಿ ಅಂತಾನೇ ಹೇಳಿದ್ದೀವಲ್ಲ ಎಂದು ಹೇಳಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಭೇಟಿ ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸತಿಶ್ ಜಾರಕಿಹೊಳಿ, ಅದು ಕೂಡ ಅಷ್ಟೇ, ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಹಾಗೆ ಖರ್ಗೆ ಅವರನ್ನು ಭೇಟಿ ಮಾಡಿದ್ದು. ಅವರು ನಮ್ಮ ಹಿರಿಯ ನಾಯಕರು. ಆದ್ದರಿಂದ ಅವರನ್ನು ಭೇಟಿ ಮಾಡಿದ್ದೇನೆ. ಇಲ್ಲಿ ಯಾವ ರೀತಿಯ ಬೇರೆ ಚರ್ಚೆ ನಡೆದಿಲ್ದ ಎಂದು ತಿಳಿಸಿದರು. ಪದೇ ಪದೇ ಸಚಿವರ ಭೇಟಿ ವಿಚಾರ ನಾವು ಹೀಗೆ ಭೇಟಿಯಾಗ್ತಾನೆ ಇರ್ತೀವಿ. ನಾವೆಲ್ಲರೂ ಒಂದೇ ಪಕ್ಷದವರು. ಹಾಗಾಗಿ ಆಗಾಗ ಎಲ್ಲರೂ ಒಮ್ಮೊಮ್ಮೆ ಭೇಟಿ ಮಾಡುತ್ತಿರುತ್ತೇವೆ ಅದರಲ್ಲೇನು? ಒಂದೇ ಸಚಿವರು, ಶಾಸಕರು ಅಂದ್ಮೇಲೆ ಭೇಟಿಯಾಗ್ತನೇ ಇರ್ತೀವಿ. ನೀವೆಲ್ಲಾ ಹೇಗೆ ಸೇರ್ತಾ ಇರ್ತೀರೋ ಹಾಗೆ ನಾವು ಕೂಡ ಸೇರ್ತಾ ಇರ್ತೀವಿ ಅಷ್ಟೆ ಎಂದು ಸತೀಶ್ ಜಾರಕಿಹೊಳಿ ಮಾಧ್ಯಮಕ್ಕೆ ಉತ್ತರಿಸಿದ್ದಾರೆ. ರಾಜ್ಯದಲ್ಲಿ ದಲಿತ ಸಿಎಂ ಕೂಗು ಸದ್ಯ ರಾಜ್ಯದಲ್ಲಿ ದಲಿತ ಸಿಎಂ ಪ್ರಸ್ತಾವನೆ ಇಲ್ಲ. ಅ ರೀತಿ ಏನಾದರೂ ಇದ್ದಾಗ ನಾವೇ ನಿಮ್ಮನ್ನಾ ಕರೆದು ಹೇಳ್ತಿವಿ. ಆ ರೀತಿ ಬೇಡಿಕೆ ನಮಗೆ ಸದ್ಯಕ್ಕಂತೂ ಇಲ್ಲ. ಸಿಎಂ ಸ್ಥಾನ ಇರೋದು ಒಂದೇ. ಈಗ ಆ ಸ್ಥಾನ ಖಾಲಿಯೇ ಇಲ್ಲ. ಸಕಾಸುಮ್ಮನೆ ಏನೇನೋ ಹೇಳುವುದು ಸರಿ ಆಗಲ್ಲ ಎಂದು ಹೇಳಿದರು. ಮುಂದಿನ ಸಿಎಂ ಜಾರಕಿಹೊಳಿ ಎಂದು ಜೈಕಾರ! ಇದೇ ವೇಳೆ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂಬ ಕೂಗು ಕೇಳಿಬಂದಿತು. ಸತೀಶ್ ಜಾರಕಿಹೊಳಿ ಮುಂದೆಯೇ ಸಿಎಂ ಕೂಗು ಕೇಳಿ ಬಂದಿರುವುದು ಬಹಳ ವಿಶೇಷವಾಗಿತ್ತು. ದಲಿತ ನಾಯಕರು ಹಾಗೂ ಕಾರ್ಯಕರ್ತರು ಮುಂದಿನ ಸಿಎಂ ಸತೀಶ್ ಜಾರಕಿಹೋಳಿ ಎಂದು ಘೋಷಣೆ ಕೂಗಿರುವುದು ಬಹಳ ವಿಶೇಷವಾಗಿತ್ತು. ಎಂಪ್ರೇಸ್ ಕಾಲೇಜು ಸಭಾಂಗಣದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಕಾರ್ಯಕ್ರಮದಲ್ಲಿ ಈ ಘಟನೆ ನಡೆಯಿತು. ಡಾ.ಜಿ.ಪರಮೇಶ್ವರ್-ಸತೀಶ್ ಜಾರಕಿಹೊಳಿ ಭೇಟಿ ಈ ಭೇಟಿ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದ್ದು, ಅವ್ರು ಒಂದು ಕಾರ್ಯಕ್ರಮಕ್ಕೆ ಬಂದಿದ್ದರು. ನಾನು‌ ಇದ್ದೇನೆ ಅಂತಾ ಗೊತ್ತಾದ ಮೇಲೆ ನನ್ನ ಭೇಟಿಗೆ ಅಂತಾ ಬಂದರು. ಪಾಪ ಅವರು ಊಟನೂ ಮಾಡಿರಲಿಲ್ಲ. ನಾ ಹೇಳಿದ ಮೇಲೆ ಅಲ್ಲೇ ಊಟ ಮಾಡ್ಕೊಂಡು ಹೋದರು. ನಮ್ಮ ನಡುವೆ ಬೇರೆ ಏನು ಚರ್ಚೆ ನಡೆದಿಲ್ಲ. ಇನ್ನು ದೆಹಲಿ ವಿಚಾರ ಏನು ನನಗೂ ಗೊತ್ತಿಲ್ಲಾ. ಸಿಕ್ಕ ಸಿಕ್ಕಾಗೆಲ್ಲಾ ನಾವು ಅದನ್ನೇ ಮಾತಾಡೋಕೆ‌ ಆಗಲ್ಲ. ಯಾವಾಗ ಮಾತಾಡಬೇಕೋ ಅವಾಗ ಖಂಡಿತಾ ಮಾತಾಡ್ತೀವಿ. ನಾವೆಲ್ಲಾ ಒಟ್ಟಾಗಿರಬೇಕು. ಸಿದ್ದರಾಮಯ್ಯ ಅವ್ರ ಜೊತೆ‌ ನಿಲ್ಲಬೇಕು. ಮುಡಾ ನಮ್ಮ‌ ಹಗರಣ ಅಂತಾ ಬಿಜೆಪಿ ಅವ್ರು ಹೇಳಿರೋ ವಿರುದ್ದವಾಗಿ ಸಂಘಟನೆ ಮಾಡೋಕೆ ನಾವು ಆಗಾಗ ಭೇಟಿ ಆಗ್ತೀವಿ. ಬಿಜೆಪಿ ಸರ್ಕಾರವನ್ನ ಅಸ್ಥಿರ ಮಾಡೋಕೆ ಹೊರಟಿದೆ. ಆ ರೀತಿ ಆಗಲು ಬಿಡಬಾರದು ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದರು. (ಅಭಿಷೇಕ್ ಹೆಗಡೆ, ನ್ಯೂಸ್18 ಕನ್ನಡ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.