NEWS

Weight Loss: ವ್ಯಾಯಾಮ ಮಾಡದೇ ಸ್ಲಿಮ್ ಆಗ್ಬೇಕಾ? ಹಾಗಾದ್ರೆ ಈ ಆಹಾರಗಳನ್ನು ತಿನ್ನೋದು ಬಿಟ್ಬಿಡಿ!

ಸಾಂದರ್ಭಿಕ ಚಿತ್ರ ಅಧಿಕ ತೂಕದಿಂದಾಗಿ (Weight Gain) ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು (Weight Loss) ಬಹುತೇಕ ಮಂದಿ ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಬಹಳ ಮಂದಿಗೆ ಇದು ಸಾಹಸವಿದ್ದಂತೆ. ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ ಮೂಲಕ ಬೆವರಿಳಿಸುತ್ತಾರೆ. ಆದರೆ ಕಳಪೆ ಜೀವನಶೈಲಿ (Unhealthy Lifestyle) ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜಿನ ಸಮಸ್ಯೆ ಸಾಕಷ್ಟು ಮಂದಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಲ್ಲದೇ, ಬಿಡುವಿಲ್ಲದ ಜೀವನ ಶೈಲಿಯಿಂದಾಗಿ ಜನಕ್ಕೆ ವ್ಯಾಯಾಮ ಮಾಡಲು ಸಮಯ ಕೂಡ ಸಿಗುತ್ತಿಲ್ಲ. ಆದ್ದರಿಂದ ಜನರಿಗೆ ತಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿದ್ದರೂ ಬಹುತೇಕ ಮಂದಿ ತೂಕ ಇಳಿಸಿಕೊಳ್ಳಲು ವಿವಿಧ ಕಸರತ್ತುಗಳನ್ನು ಮಾಡುತ್ತಿದ್ದಾರೆ. ನೀವು ಕೂಡ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಈ ಐದು ಬಿಳಿ ಆಹಾರಗಳ ಸೇವನೆಯನ್ನು ಮೊದಲು ತಪ್ಪಿಸಿ. ಈ ಮೂಲಕ ಸುಲಭವಾಗಿ ತೂಕವನ್ನು ಕಳೆದುಕೊಳ್ಳಿ. ತೂಕ ಇಳಿಕೆಗೆ ತ್ಯಜಿಸಬೇಕಾದ ಬಿಳಿ ಆಹಾರಗಳು ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ನೀವು ಯಾವುದೇ ರೀತಿಯ ವ್ಯಾಯಾಮಗಳನ್ನು ಮಾಡುವ ಅಗತ್ಯವಿಲ್ಲ. ತೂಕವನ್ನು ಕಳೆದುಕೊಳ್ಳಲು ನಿಮ್ಮ ಆಹಾರಕ್ರಮದಲ್ಲಿ ಕೆಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಈ ಬಿಳಿ ಆಹಾರಗಳನ್ನು ನಿಮ್ಮ ಆಹಾರದ ಪಟ್ಟಿಯಿಂದ ತೆಗೆದುಹಾಕಬೇಕು. ಹಾಗಾದ್ರೆ ಅವು ಯಾವುವು ಅಂತೀರಾ? ಈ ಸ್ಟೋರಿ ಓದಿ. ತೂಕ ಇಳಿಕೆಗೆ ವಿಶೇಷವಾಗಿ ರಾತ್ರಿ ಹೊತ್ತು ಈ ಆಹಾರಗಳನ್ನು ತಿನ್ನಬೇಡಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ತಮ್ಮ ಆಹಾರದಿಂದ ಹಿಟ್ಟು, ಅಕ್ಕಿ, ಸಕ್ಕರೆ, ಹಾಲು ಮತ್ತು ಉಪ್ಪು ಸೇವಿಸುವುದನ್ನು ದೂರ ಇಡಬೇಕು. ಅಂದರೆ ವೈದ್ಯರು ಹೇಳುವ ಪ್ರಕಾರ, ತೂಕವನ್ನು ಕಳೆದುಕೊಳ್ಳಲು ನೀವು ಮೈದಾ ಹಿಟ್ಟಿನ ಉತ್ಪನ್ನಗಳು, ಬಿಳಿ ಅಕ್ಕಿ, ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳು, ಹಾಗೆಯೇ ಹಾಲು ಮತ್ತು ಹಾಲಿನ ಉತ್ಪನ್ನಗಳು, ಜೊತೆಗೆ ಉಪ್ಪನ್ನು ತಿನ್ನುವುದನ್ನು ನಿಲ್ಲಿಸಬೇಕು. ವಿಶೇಷವಾಗಿ ರಾತ್ರಿ ಹೊತ್ತು ಈ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸುವುದರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಅಲ್ಲದೇ ಒಂದು ವಾರದೊಳಗೆ ಇದರ ಪರಿಣಾಮವನ್ನು ನೀವೇ ನೋಡುತ್ತೀರಿ. ಇದನ್ನೂ ಓದಿ: ಕಪ್ಪಾದ ಮೊಣಕೈಯಿಂದಿ ನಿಮ್ಮ ಅಂದ ಹಾಳಾಗಿದ್ಯಾ? ಈ ಸಮಸ್ಯೆಗೆ ಇಲ್ಲಿದೆ ನೋಡಿ ಮದ್ದು! ಇದನ್ನೂ ಓದಿ: ಸೊಂಪಾದ ಕೂದಲು ನಿಮ್ಮದಾಗಬೇಕಾ? ಹಾಗಾದ್ರೆ ಬಾಳೆಹಣ್ಣನ್ನು ಕೂದಲಿಗೆ ಹೀಗೆ ಹಚ್ಚಿ! ರಾತ್ರಿ ಹೊತ್ತು ಈ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿ ಇದಲ್ಲದೇ, ನೀವು ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಮಲಗಲು ನಾಲ್ಕು ಗಂಟೆಗಳಿಗೂ ಮುನ್ನ ಇವುಗಳನ್ನು ಎಂದಿಗೂ ತಿನ್ನಬೇಡಿ. ಅಲ್ಲದೇ, ರಾತ್ರಿ ಹೊತ್ತು ಊಟ ಮಾಡಿದ ತಕ್ಷಣ ನಿದ್ರೆ ಮಾಡಬೇಡಿ. ಏಕೆಂದರೆ ತಿಂದ ತಕ್ಷಣ ಮಲಗುವುದು ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ನೀವು ಈ ತಪ್ಪನ್ನು ಮಾಡುತ್ತಿದ್ದರೆ, ತಕ್ಷಣ ಇದನ್ನು ನಿಲ್ಲಿಸಿ. ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತೀರಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.