NEWS

Sabarimala: ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಶಬರಿಮಲೈ ವಿವಾದ ಮುನ್ನಲೆಗೆ! ಕೀಟನಾಶಕ ಇದೇ ಎನ್ನಲಾದ ಪ್ರಸಾದವನ್ನು ಏನು ಮಾಡ್ತಾರೆ?

ಶಬರಿಮಲೈ ದೇವಸ್ಥಾನ ತಿರುವನಂತಪುರ: ಇತ್ತೀಚೆಗೆ ತಿರುಪತಿ ದೇವಸ್ಥಾನದ (Tirupati Temple) ಲಡ್ಡು (Laddu) ಪ್ರಸಾದದಲ್ಲಿ ದನದ ಕೊಬ್ಬು (Beef Fat) ಹಾಗೂ ಮೀನಿನ ಎಣ್ಣೆಯ (Fish Oil) ಅಂಶ ಪತ್ತೆಯಾಗಿದ್ದು, ಇಡೀ ದೇಶದ ಗಮನ ಸೆಳೆದಿತ್ತು. ಕೋಟ್ಯಾಂತರ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿತ್ತು. ಇದೀಗ ಅಂತಹದ್ದೇ ಪ್ರಕರಣ ಕೇರಳದ (Kerala) ಶಬರಿಮಲೆ ದೇವಸ್ಥಾನದಲ್ಲಿ (Sabarimala Temple) ಕಂಡುಬಂದಿದೆ. ಹೌದು, ಶಬರಿಮಲೆ ‘ಅರವಣ ಪಾಯಸ’ ಪ್ರಸಾದದಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ (Insecticide) ಇರುವುದು ಪತ್ತೆಯಾಗಿದೆ. ಹೀಗಾಗಿ ‘ಅರವಣ’ವನ್ನು ಗೊಬ್ಬರವನ್ನಾಗಿ (Fertilizer) ಪರಿವರ್ತಿಸಲಾಗುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಪಾಯಸಕ್ಕೆ ಬಳಸಲಾಗುವ ಏಲಕ್ಕಿಯಲ್ಲಿ ಕೀಟನಾಶಕ ಬಳಕೆ ಈ ವರದಿ ಪ್ರಕಾರ, ಪ್ರಸಾದದ ಪಾಯಸಕ್ಕೆ ಬಳಸಲಾಗುವ ಏಲಕ್ಕಿಯಲ್ಲಿ ಅನುಮತಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಕೀಟನಾಶಕ ಬಳಕೆ ಮಾಡಲಾಗಿದೆ ಎನ್ನುವ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 6.65 ಲಕ್ಷ ಕಂಟೈನರ್‌ನಷ್ಟು ‘ಅರವಣ’ವನ್ನು ಬಳಕೆ ಮಾಡದೆ ಬಿಡಲಾಗಿದೆ ಎಂದು ಹೇಳಲಾಗಿದೆ. 5.5 ಕೋಟಿ ರೂ, ಮೌಲ್ಯದ ‘ಅರವಣ’ ದಾಸ್ತಾನ ವಿಲೇವಾರಿ ಸೇವನೆಗೆ ಯೋಗ್ಯವಾಗಿರುವ 5.5 ಕೋಟಿ ರೂ, ಮೌಲ್ಯದ ‘ಅರವಣ’ ದಾಸ್ತಾನನ್ನು ವಿಲೇವಾರಿ ಮಾಡಲು ದೇವಸ್ಥಾನವನ್ನು ನಿರ್ವಹಣೆ ಮಾಡುವ ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ನಿರ್ಧರಿಸಿದೆ. ಈ ಬೃಹತ್ ಪ್ರಮಾಣದ ‘ಅರವಣ’ವನ್ನು ವಿಲೇವಾರಿ ಮಾಡುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತ್ತು. ಕಾಡುಪ್ರದೇಶಗಳಲ್ಲಿ ವಿಲೇ ಮಾಡುವ ನಿರ್ಧಾರಕ್ಕೆ ಅಧಿಕಾರಿಗಳಿಂದ ವಿರೋಧ ವ್ಯಕ್ತವಾಗಿತ್ತು. ಪ್ರಸಾದದ ವಿಲೇವಾರಿಗೆ ಹಲವು ಆಯ್ಕೆಗಳು ಮುಂದೆ ಇದ್ದು, ಭಕ್ತರ ಭಾವನೆಗಳಿಗೆ ಧಕ್ಕೆ ಬರದಂತೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಟಿಡಿಬಿ ಬಯಸಿತ್ತು. ಇದನ್ನೂ ಓದಿ: Tirupati: ತಿಮ್ಮಪ್ಪನ ವಿಗ್ರಹ ಸ್ಪರ್ಶಿಸುವ ಅರ್ಚಕರಿಗೆ ಏನಾಗುತ್ತದೆ ಗೊತ್ತಾ? ಈ ಅನುಭವ ಕೇಳಿದ್ರೆ ನಿಮ್ಮ ಮೈ ಜುಂ ಅನ್ನುತ್ತದೆ! ವೈಜ್ಞಾನಿಕ ವಿಲೇವಾರಿಗೆ ಟೆಂಡರ್ ದಾಸ್ತಾನನ್ನು ವೈಜ್ಞಾನಿಕ ವಿಲೇವಾರಿ ಮಾಡಲು ಟಿಡಿಬಿ ಟೆಂಡರ್ ಆಹ್ವಾನಿಸಿತ್ತು. ಕೇರಳ ಮೂಲದ ಇಂಡಿಯನ್ ಸೆಂಟಿಫಿಗ್ ಎಂಜಿನಿಯರಿಂಗ್ ಸೆಲ್ಯೂಷನ್ಸ್ ಸಂಸ್ಥೆ ಬಿಡ್ ಗೆದ್ದುಕೊಂಡು, ಕೆಲಸ ನಿರ್ವಹಿಸಲು ಮುಂದಾಗಿದೆ ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್ ಪ್ರಶಾಂತ್ ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಅರವಣವನ್ನು ಗೊಬ್ಬರವಾಗಿ ಪರಿವರ್ತನೆ ‘ಅರವಣ’ವನ್ನು ಹೈದರಾಬಾದ್‌ನಲ್ಲಿರುವ ತಮ್ಮ ವ್ಯವಸ್ಥೆಯಲ್ಲಿ ವೈಜ್ಞಾನಿಕವಾಗಿ ಗೊಬ್ಬರವನ್ನಾಗಿ ಪರಿವರ್ತಿಸಲಾಗುವುದು ಎನ್ನುವ ಪ್ರಸ್ತಾಪವನ್ನು ಮುಂದಿಟ್ಟರು. ಮೊದಲು ಕೋಟ್ಟಯಂಗೆ ಸಾಗಿಸಿ, ಬಳಿಕ ಅದನ್ನು ಹೈದರಾಬಾದ್‌ಗೆ ತೆಗೆದುಕೊಂಡು ಹೋಗಲಾಗುತ್ತದೆ. ಅರವಣವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದನ್ನು ಟಿಡಿಬಿಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. `ಅರವಣ’ದ ಮಾರಾಟದಿಂದ ದೇಗುಲಕ್ಕೆ 147 ಕೋಟಿ ರೂ.. ಆದಾಯ ಅಕ್ಕಿ ಹಾಗೂ ಬೆಲ್ಲದಿಂದ ‘ಅರವಣ’ವನ್ನು ತಯಾರಿಸಲಾಗುತ್ತದೆ. ಇದು ಶಬರಿಮಲೆ ದೇಗುಲದ ಪ್ರಮುಖ ಆದಾಯದ ಮೂಲವೂ ಹೌದು. `ಅರವಣ’ದ ಮಾರಾಟದಿಂದ ದೇಗುಲ 147 ಕೋಟಿ ರೂ. ಗಳಿಸಿದ್ದು, ಇದು ದೇಗುಲದ ಒಟ್ಟಾರೆ ಆದಾಯದ ಶೇ 40 ರಷ್ಟು ಲಾಭ ಒದಗಿಸುತ್ತದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.