NEWS

October 7 Anniversary: ದಾಳಿಗೆ ಪ್ರತೀಕಾರ, ಈವರೆಗೆ 41 ಸಾವಿರ ಜನರ ಹತ್ಯೆ; ಇಸ್ರೇಲ್​ನ ಅಕ್ಟೋಬರ್ 7ರ ಕರಾಳ ದಿನದ ಬಗ್ಗೆ ನಿಮಗೆಷ್ಟು ಗೊತ್ತು?

ಇಸ್ರೇಲ್ ಮೇಲೆ ಹಮಾಸ್ ದಾಳಿ ಇಸ್ರೇಲ್ (Israel) ಇತಿಹಾಸದಲ್ಲಿ 2023ರ ಅಕ್ಟೋಬರ್ 7 ಮಾರಣಾಂತಿಕ ದಿನವಾಗಿದೆ. ಹಠಾತ್ ದಾಳಿಯನ್ನು ಪ್ರಾರಂಭಿಸಿದ ಪ್ಯಾಲೆಸ್ಟೈನ್ (Palestine) ಮೂಲದ ಹಮಾಸ್ (Hamas) ಹೋರಾಟಗಾರರು ಗಾಜಾ ಗಡಿಯನ್ನು (Gaza border) ಭೇದಿಸಿ ಯಹೂದಿ (Jewish) ಪಟ್ಟಣಗಳು ​​ಮತ್ತು ನಗರಗಳನ್ನು ಪ್ರವೇಶಿಸಿ ನೂರಾರು ಜನರನ್ನು ಕೊಂದರು. ಈ ದಾಳಿಯು ಇಸ್ರೇಲಿ ಭಾಗದಲ್ಲಿ 1,205 ಜನರ ಸಾವಿಗೆ ಕಾರಣವಾಯಿತು, ಅವರಲ್ಲಿ ಹೆಚ್ಚಿನವರು ನಾಗರಿಕರು ಮತ್ತು 250 ಕ್ಕೂ ಹೆಚ್ಚು ಜನರನ್ನು ಹಮಾಸ್ ಒತ್ತೆಯಾಳುಗಳಾಗಿ ತೆಗೆದುಕೊಂಡಿದ್ದರು. ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್, ಗಾಜಾ ಪಟ್ಟಿಯಲ್ಲಿ ಭೂಮಿ, ಸಮುದ್ರ ಮತ್ತು ವಾಯು ಮಾರ್ಗದಿಂದ ಸಂಪೂರ್ಣ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ದಾಳಿಯಲ್ಲಿ ಕನಿಷ್ಠ 41,788 ಜನರನ್ನು ಕೊಂದಿತು, ಅವರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದರು. ಅಕ್ಟೋಬರ್ 7ರ ದಾಳಿಗೆ ಒಂದು ವರ್ಷವಾಗಿದ್ದು, ಆ ಭಯಾನಕ ದಿನದಂದು ನಡೆದ ಘಟನೆಗಳು ಏನು ಅನ್ನೋದನ್ನ ಈ ಸ್ಟೋರಿಯಲ್ಲಿ ನೋಡೋಣ. ಇದನ್ನೂ ಓದಿ: ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡುವ ಕ್ಷಿಪಣಿ ಇದು; ಕ್ಷಣದಲ್ಲೇ ವಿನಾಶ ಮಾಡುತ್ತೆ ಈ ಮಿಸೈಲ್! ಗಡಿಯನ್ನು ಭೇದಿಸಿ ಇಸ್ರೇಲ್​ಗೆ ಹಮಾಸ್ ಎಂಟ್ರಿ ದಾಳಿಯು ಅಕ್ಟೋಬರ್ 7 ರಂದು ಬೆಳಿಗ್ಗೆ 6:15ಕ್ಕೆ ಪ್ರಾರಂಭವಾಯಿತು, ಗುಂಪುಗಳಲ್ಲಿ ಸಂಘಟಿತವಾದ ಹಮಾಸ್ ಹೋರಾಟಗಾರರು, ‘ಕಬ್ಬಿಣದ ಗೋಡೆ’ ಎಂದು ಕರೆಯಲ್ಪಡುವ ಪರಿಷ್ಕೃತ ಗಡಿಯನ್ನು ಭೇದಿಸಲು ತಯಾರಿ ಆರಂಭಿಸಿ ಇಸ್ರೇಲಿ ಪ್ರದೇಶವನ್ನು ಪ್ರವೇಶಿಸಿದ್ರು. ನಹಾಲ್ ಓಝ್ ನೆಲೆಯು ಹಮಾಸ್ ಬಂದೂಕುಧಾರಿಗಳಿಂದ ಆಕ್ರಮಿಸಲ್ಪಟ್ಟಿತು. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಹಮಾಸ್ ಉತ್ತರದಲ್ಲಿ ಎರೆಜ್ ಕ್ರಾಸಿಂಗ್‌ನಿಂದ ದಕ್ಷಿಣದ ಕೆರೆಮ್ ಶಾಲೋಮ್‌ವರೆಗೆ ಸುಮಾರು 30 ಸ್ಥಳಗಳಲ್ಲಿ ಗಡಿ ಬೇಲಿಯನ್ನು ಮುರಿದಿತ್ತು. ಇಸ್ರೇಲಿ ಪಟ್ಟಣಗಳ ಮೇಲೆ ದಾಳಿ ಅಕ್ಟೋಬರ್ 7 ರಂದು ಇಸ್ರೇಲಿಗರು ಏಳು ದಿನಗಳ ಕಾಲ ನಡೆಯುವ ಯಹೂದಿ ಹಬ್ಬವಾದ ಸುಕ್ಕೋಟ್ ಅನ್ನು ಮುಕ್ತಾಯಗೊಳಿಸುತ್ತಿರುವಾಗ, ಸೈರನ್‌ಗಳ ಭಯಾನಕ ಶಬ್ದವು ದೇಶದಾದ್ಯಂತ ಪ್ರತಿಧ್ವನಿಸಿತು. ಇಸ್ರೇಲಿ ಗಡಿಯನ್ನು ಉಲ್ಲಂಘಿಸಿದ ಅರ್ಧ ಗಂಟೆಯೊಳಗೆ, ಹಮಾಸ್ ಹೋರಾಟಗಾರರು ಗಾಜಾ ಗಡಿಯ ಸಮೀಪವಿರುವ ಪ್ರಮುಖ ಇಸ್ರೇಲಿ ಪಟ್ಟಣಗಳು ​​ಮತ್ತು ನಗರಗಳನ್ನು ಪ್ರವೇಶಿಸಿದರು. ಕಾರ್ಯಕ್ರಮಕ್ಕೆ ಬಂದಿದ್ದ 370 ಜನರ ಹತ್ಯೆ 2023ರ ಅಕ್ಟೋಬರ್ 7ರ ಬೆಳಿಗ್ಗೆ 6:29ಕ್ಕೆ, ದಕ್ಷಿಣ ಇಸ್ರೇಲ್‌ನಲ್ಲಿ ನೋವಾ ಸಂಗೀತ ಉತ್ಸವದಲ್ಲಿ ಪಾರ್ಟಿ ನಡೆಯುತ್ತಿತ್ತು, ಅಲ್ಲಿ ಸುಮಾರು 3,000 ಜನರು ಡಿಜೆ ಮ್ಯೂಸಿಕ್ ಎಂಜಯ್ ಮಾಡಲು ಜಮಾಯಿಸಿದ್ದರು. ಅವರಲ್ಲಿ ಕೆಲವರು ಆಕಾಶದಲ್ಲಿ ರಾಕೆಟ್‌ಗಳನ್ನು ಗಮನಿಸಿ ಪಟಾಕಿಗಳಿರಬಹುದು ಎಂದು ಯೋಚಿಸಿದ್ದರು. ಕಾರ್ಯಕ್ರಮದ ಸಮೀಪ ರಾಕೆಟ್‌ಗಳು ಸ್ಫೋಟಗೊಂಡಾಗ, ಜನರು ತಮ್ಮ ಸ್ಥಳದಿಂದ ಓಡಿಹೋಗಲು ಪ್ರಾರಂಭಿಸಿದರು. ಅವರು ಹೊರಡುತ್ತಿರುವಾಗ, ನೂರಾರು ಹಮಾಸ್ ಹೋರಾಟಗಾರರು ಮೋಟಾರು ಬೈಕ್‌ಗಳಲ್ಲಿ, ಪಿಕಪ್ ಟ್ರಕ್‌ಗಳಲ್ಲಿ ಮತ್ತು ಮೋಟಾರು ಚಾಲಿತ ಪ್ಯಾರಾಗ್ಲೈಡರ್‌ಗಳಲ್ಲಿ ಸ್ಥಳವನ್ನು ತಲುಪಿ, ಕನಿಷ್ಠ 370 ಜನರನ್ನು ಕೊಂದರು. ಪ್ರಾಣ ಉಳಿಸಿಕೊಳ್ಳಲು ಓಡುತ್ತಿದ್ದವರ ಮೇಲೆ ಗುಂಡಿನ ದಾಳಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಓಡಿಹೋಗುತ್ತಿದ್ದಾಗ, ಹಮಾಸ್ ಹೋರಾಟಗಾರರು ತಮ್ಮ ವಾಹನಗಳ ಮೇಲಿದ್ದ ಭಾರವಾದ ಮೆಷಿನ್ ಗನ್‌ಗಳಿಂದ ಗುಂಡು ಹಾರಿಸಲು ಪ್ರಾರಂಭಿಸಿದರು. ಇಸ್ರೇಲಿ ಪಡೆಗಳು ಪರಿಸ್ಥಿತಿಯನ್ನು ತಮ್ಮ ನಿಯಂತ್ರಣವನ್ನು ಮರಳಿ ಪಡೆಯಲು ಸುಮಾರು ಆರು ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿತು. ಆದರೆ, ಆ ಹೊತ್ತಿಗೆ ಹಮಾಸ್ ಪಡೆಗಳು ಹಲವಾರು ಒತ್ತೆಯಾಳುಗಳನ್ನು ಪ್ಯಾಲೆಸ್ತೀನ್‌ಗೆ ತೆಗೆದುಕೊಂಡು ಹೋಗಿದ್ದರು. ಇಸ್ರೇಲ್‌ನ ನಿರಂತರ ಆಕ್ರಮಣ, ಗಾಜಾದ ದಿಗ್ಬಂಧನ, ವಸಾಹತುಗಳ ವಿಸ್ತರಣೆ, ಅಂತಾರಾಷ್ಟ್ರೀಯ ಕಾನೂನನ್ನು ಇಸ್ರೇಲ್‌ನ ಕಡೆಗಣಿಸುವಿಕೆ ಜೊತೆಗೆ ಅಲ್-ಅಕ್ಸಾ ಮಸೀದಿಗೆ ಬೆದರಿಕೆಗಳು ಮತ್ತು ಪ್ಯಾಲೆಸ್ಟೀನಿಯಾದ ಸಾಮಾನ್ಯ ದುಸ್ಥಿತಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಮೇಲೆ ಈ ದಾಳಿಯನ್ನು ನಡೆಸಿದ್ದೇವೆ ಎಂದು ಹಮಾಸ್ ಹೇಳಿತ್ತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.