NEWS

Weight Loss: ನಿಮ್ಮ ವಯಸ್ಸಿಗೆ ನೀವು ಎಷ್ಟು ನಿಮಿಷ ವಾಕಿಂಗ್‌ ಮಾಡ್ಬೇಕು? ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ ವಾಕಿಂಗ್‌ (Walking) ಸರಳವಾಗಿ ಮಾಡಬಹುದಾದ ಆದರೆ ಹೆಚ್ಚು ಪರಿಣಾಮಕಾರಿಯಾದ ವ್ಯಾಯಾಮವಾಗಿದೆ (Exercise). ಇದು ಎಲ್ಲಾ ವಯಸ್ಸಿನವರಿಗೂ ಸೂಕ್ತವಾಗಿದ್ದು ತೂಕ ನಷ್ಟಕ್ಕೆ (Weight Loss) ಉತ್ತಮ ಆಯ್ಕೆಯಾಗಿದೆ. ವಾಕಿಂಗ್ ಸುಲಭವಾದ ಆದರೆ ಶಕ್ತಿಯುತವಾದ ವ್ಯಾಯಾಮವಾಗಿದ್ದು ಸಾಮಾನ್ಯ ಫಿಟ್ನೆಸ್ (Fitness) ಅನ್ನು ಹೆಚ್ಚಿಸುತ್ತದೆ. ಅದು ಸ್ನಾಯುಗಳನ್ನು ಬಲಪಡಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುವುದರೊಂದಿಗೆ ಉತ್ತಮ ಮನಸ್ಥಿತಿಯನ್ನು ಬೆಂಬಲಿಸುತ್ತದೆ. ಪ್ರತಿದಿನ 30-ನಿಮಿಷಗಳ ಒಂದು ಹುರುಪಿನ ನಡಿಗೆಯು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯವನ್ನು ಬಲಪಡಿಸುವುದರೊಂದಿಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದಾಗ್ಯೂ, ವಾಕಿಂಗ್‌ ಮಾಡುವಾಗ ನಿಮ್ಮ ವೇಗ, ತೀವ್ರತೆ ಮತ್ತು ಎಷ್ಟು ಸಮಯ ಮಾಡುತ್ತೀರಿ ಮುಖ್ಯವಾಗುತ್ತದೆ. ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಎಷ್ಟು ನಿಮಿಷ ನಡೆಯಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. 18 – 40 ವರ್ಷದವರು ಪ್ರತಿದಿನ ಎಷ್ಟು ನಿಮಿಷ ನಡೆಯಬೇಕು? ಕೌಶಾಂಬಿಯ ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಎಂಡೋಕ್ರೈನಾಲಜಿಯ ಹಿರಿಯ ಸಲಹೆಗಾರ ಡಾ. ಅಮಿತ್ ಛಾಬ್ರಾ ಅವರು, 18 ರಿಂದ 40 ವರ್ಷ ವಯಸ್ಸಿನವರು ವಾರದಲ್ಲಿ ಐದು ದಿನಗಳು 45 ರಿಂದ 60 ನಿಮಿಷಗಳ ಕಾಲ ವೇಗವಾಗಿ ನಡೆಬೇಕು ಎಂಬುದಾಗಿ ಸಲಹೆ ನೀಡುತ್ತಾರೆ. ಇಷ್ಟು ಸಮಯ ವಾಕಿಂಗ್‌ ಮಾಡುವುದು ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುತ್ತದೆ. ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬರ್ನ್‌ ಮಾಡಲು ಸಹಕಾರಿಯಾಗಿದೆ. ಇನ್ನು, 40 ವರ್ಷದೊಳಗಿನ ಕಿರಿಯ ಜನರಿಗೆ, ಹೆಚ್ಚಿನ ಹೆಜ್ಜೆಯ (ಉದಾಹರಣೆಗೆ 10,000 ಹೆಜ್ಜೆ) ವೇಗದ ನಡಿಗೆಯು ಗಮನಾರ್ಹ ಕ್ಯಾಲೋರಿ ಬರ್ನ್‌ ಮತ್ತು ತೂಕ ನಷ್ಟಕ್ಕೆ ಕಾರಣವಾಗಬಹುದು. 40 ವರ್ಷಕ್ಕಿಂತ ಮೇಲ್ಪಟ್ಟರು ಎಷ್ಟು ಹೊತ್ತು ವಾಕಿಂಗ್‌ ಮಾಡಬೇಕು? 40 ಮತ್ತು 50 ರ ವಯಸ್ಸಿನವರಲ್ಲಿ ಚಯಾಪಚಯವು ನಿಧಾನಗೊಳ್ಳುತ್ತದೆ. ಈ ವಯಸ್ಸಿನವರು ಮಧ್ಯಮ ವೇಗದಲ್ಲಿ 30 ರಿಂದ 45 ನಿಮಿಷಗಳ ವಾಕಿಂಗ್‌ನಿಂದ ಪ್ರಯೋಜನ ಪಡೆಯಬಹುದು. ಶಕ್ತಿ ವ್ಯಾಯಾಮಗಳು, ಇಳಿಜಾರುಗಳು ಅಥವಾ ಗುಡ್ಡಗಾಡುಗಳಂಥ ವಿವಿಧ ಭೂಪ್ರದೇಶಗಳಲ್ಲಿ ನಡೆಯುವುದು ಪ್ರಯೋಜನಗಳನ್ನು ಹೆಚ್ಚಿಸಬಹುದು. ಆ ವಯಸ್ಸಿನಲ್ಲಿ ಜಾಯಿಂಟ್‌ಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಹೀಗಾಗಿ, ಸೂಕ್ತವಾದ ಪಾದರಕ್ಷೆಗಳನ್ನು ಧರಿಸುವುದು ಮತ್ತು ಸಮ ಮೇಲ್ಮೈಯಲ್ಲಿ ನಡೆಯುವುದನ್ನು ಪರಿಗಣಿಸಬೇಕು. 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ವಾಕಿಂಗ್ 60 ವರ್ಷ ವಯಸ್ಸಿನ ಹಿರಿಯರು ತೂಕ ಕಳೆದುಕೊಳ್ಳುವ ಗುರಿ ಹೊಂದಿದ್ದರೂ ಅದರೊಂದಿಗೆ ಜೊತೆಗೆ ಚಲನಶೀಲತೆ ಮತ್ತು ಸಮತೋಲನವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ ಸ್ಥಿರವಾದ, ಆರಾಮದಾಯಕವಾದ ವೇಗದಲ್ಲಿ ನಿಯಮಿತವಾದ 20 ರಿಂದ 30 ನಿಮಿಷಗಳ ನಡಿಗೆ ಅವರಿಗೆ ಸೂಕ್ತವಾಗಿದೆ. ಅಲ್ಲದೇ ನೋವುಗಳನ್ನು ತಪ್ಪಿಸಲು ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು ಮತ್ತು ಅತಿಯಾದ ವ್ಯಾಯಾಮವನ್ನು ತಪ್ಪಿಸುವುದು ಬಹಳ ಮುಖ್ಯ. ಇದನ್ನೂ ಓದಿ: ಬೆಳ್ಳುಳ್ಳಿಯನ್ನು ಯಾವ ಸಮಯದಲ್ಲಿ ತಿನ್ನುವುದು ಆರೋಗ್ಯಕರ ಗೊತ್ತೇ? 90% ಜನರು ಈ ತಪ್ಪನ್ನು ಮಾಡುತ್ತಾರೆ! 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಸಕ್ರಿಯವಾಗಿರಲು ಮತ್ತು ತಮ್ಮ ತೂಕವನ್ನು ನಿರ್ವಹಿಸಲು ವಾಕಿಂಗ್ ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ಹಾಗಾಗಿ ಅವರು ಪ್ರತಿ ದಿನ 20 ರಿಂದ 30 ನಿಮಿಷಗಳ ವಾಕಿಂಗ್‌ ಮಾಡಬಹುದು. ಕಡಿಮೆ ವೇಗದಲ್ಲಿ ಅಥವಾ ಸ್ನೇಹಿತರ, ಸಂಗಾತಿಯ ಜೊತೆಗೆ ನಡೆಯುವುದು ಈ ಅನುಭವವನ್ನು ಹೆಚ್ಚು ಆನಂದದಾಯಕವಾಗಿಸಬಹುದು. ಅಲ್ಲದೇ ಸುರಕ್ಷಿತವಾಗಿಸಲೂ ಸಹಾಯ ಮಾಡುತ್ತದೆ. ಇನ್ನು, “ನಿಮ್ಮ ವಯಸ್ಸು ಏನೇ ಇರಲಿ, ಸ್ಥಿರವಾಗಿರುವುದು ಮತ್ತು ಸಮತೋಲಿತ ಆಹಾರದೊಂದಿಗೆ ವಾಕಿಂಗ್‌ ಮಾಡುವುದು ಮುಖ್ಯ” ಎಂದು ಕೌಶಂಬಿಯ ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಎಂಡೋಕ್ರೈನಾಲಜಿಯ ಹಿರಿಯ ಸಲಹೆಗಾರ ಡಾ. ರಾಹುಲ್ ಚೌಡಾ ಹೇಳುತ್ತಾರೆ. ಹಾಗೆಯೇ ಆರೋಗ್ಯಕರ ಆಹಾರ, ಸರಿಯಾದ ಜಲಸಂಚಯನ ಮತ್ತು ಸೂಕ್ತವಾದ ವಿಶ್ರಾಂತಿಯೊಂದಿಗೆ ಸಂಯೋಜಿಸಿದಾಗ ತೂಕ ನಷ್ಟಕ್ಕೆ ವಾಕಿಂಗ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೆನಪಿಡಬೇಕು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.