NEWS

Child Care: ನಿಮ್ಮ ಮಕ್ಕಳ ದೈನಂದಿನ ಆಹಾರ ಕ್ರಮ ಹೇಗಿರಬೇಕು?

ಸಾಂದರ್ಭಿಕ ಚಿತ್ರ ಪ್ರಸ್ತುತ ಜೀವನ ಶೈಲಿ (Lifestyle), ಒತ್ತಡದ ಬದುಕಿನಿಂದಾಗಿ ಪೋಷಕರು ಮಕ್ಕಳ ಆರೋಗ್ಯದೆಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಹೌದು, ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ಭವಿಷ್ಯಕ್ಕೆಂದು ಹಣ ಗಳಿಸುವ ಭರದಲ್ಲಿರುವ ಪೋಷಕರು ಬೆಳೆಯುತ್ತಿರುವ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುವ ಆಹಾರ ಕ್ರಮದ ಬಗ್ಗೆ ಮಾತ್ರ ಗಮನಹರಿಸದಿರುವುದು ವಿಪರ್ಯಾಸ. ಸಮಯ ಇಲ್ಲವೆಂದೋ, ಅಥವಾ ಸುಲಭವಾಗಿ ದೆ ಎಂದೋ ಒಟ್ಟಿನಲ್ಲಿ ಮಕ್ಕಳಿಗೆ ಪ್ರಕೃತಿ ದತ್ತವಾಗಿ ದೊರೆಯುವ ಪದರ್ಥಾಗಳ ಬದಲಿ ಕರಿದ ಬೇಕರಿ ಪದಾರ್ಥ, ಚಾಕೋಲೇಟ್, ಹಾಗೂ ಸಂಸ್ಕರಿಸಿದ ಆಹಾರಗಳನ್ನು ನೀಡುತ್ತಿದ್ದೇವೆ. ಈ ತಪ್ಪಾದ ಆಹಾರ ಪದ್ದತಿಯು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಪೋಷಕರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ. ಹಾಗಾದರೆ, ಮಕ್ಕಳ ಆಹಾರ ಕ್ರಮ ಹೇಗಿರಬೇಕು? ಇಲ್ಲಿದೆ ನೋಡಿ ಉತ್ತರ. ಪ್ರೋಟೀನ್‌ಗಳು ಮಕ್ಕಳ ದೈಹಿಕ ಬೆಳವಣಿಗೆ ಅದರಲ್ಲೂ ಸ್ನಾಯುವಿನ ಬೆಳವಣಿಗೆಗೆ ಪ್ರೋಟೀನ್ ಅತ್ಯಂತ ಅಗತ್ಯವಾದುದು. ಇದು ಸಾಮಾನ್ಯವಾಗಿ ಕೋಳಿ, ಟರ್ಕಿ, ಮೀನು, ತೋಫು ಮತ್ತು ದ್ವಿದಳ ಧಾನ್ಯಗಳಲ್ಲಿ ದೊರೆಯುತ್ತದೆ. ಇದು ದೇಹದಲ್ಲಿ ಯಾವುದೇ ಅಂಗಕ್ಕೆ ಪೆಟ್ಟು ಬಿದ್ದಾಗ, ಅದನ್ನು ಸರಿಪಡಿಸಲು ಹಾಗೂ ಒಟ್ಟಾರೆ ಬೆಳವಣಿಗೆಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ. ಇದನ್ನೂ ಓದಿ: ಜೀವನದಲ್ಲಿ ಯಾವತ್ತೂ ಸಂತೋಷವಾಗಿರಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ! ಅದರಲ್ಲೂ ಸಾಲ್ಮನ್ ಮತ್ತು ಟ್ಯೂನ್ ಮೀನುಗಳು ಹೆಚ್ಚಿನ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುವುದರಿಂದ ಹೆಚ್ಚಿನ ಮಟ್ಟದ ಪ್ರೋಟೀನ್ ಗಳನ್ನು ಒದಗಿಸುತ್ತವೆ. ಇದು ಮಕ್ಕಳ ಮೆದುಳಿನ ಬೆಳವಣಿಗೆ ಸಹಕಾರಿ. ಧಾನ್ಯಗಳು ಕಂದು ಅಕ್ಕಿ, ಓಟ್ಸ್, ಕ್ವಿನೋವಾ ಮತ್ತು ಗೋಧಿಯಂತಹ ಧಾನ್ಯಗಳು ಕಾರ್ಬೋಹೈಡ್ರೇಟ್‌ಗಳು ಮತ್ತು ನಾರಿನಾಂಶವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುತ್ತವೆ. ಇದು ದೇಹಕ್ಕೆ ನಿರಂತರ ಶಕ್ತಿಯನ್ನು ಒದಗಿಸುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಧಾನ್ಯಗಳನ್ನು ಸೇವಿಸುವುದರಿಂದ ದಿನವಿಡೀ ಏಕಾಗ್ರತೆ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ಬಹುತೇಕ ಧಾನ್ಯಗಳು ಬಿ ಜೀವಸತ್ವಗಳಲ್ಲಿ ಸಮೃದ್ಧವಾಗಿದ್ದು, ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಣ್ಣುಗಳು ಹಣ್ಣುಗಳು ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದ. ಕಿತ್ತಳೆ, ಸ್ಟ್ರಾಬೆರಿಗಳಂತಹ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಬೆರ್ರಿ ಹಣ್ಣುಗಳು, ಸೇಬುಗಳು ಬಾಳೆಹಣ್ಣುಗಳು ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಂತೆ ಹಲವಾರು ಪೋಷಕಾಂಶಗಳನ್ನು ನೀಡುತ್ತವೆ. ಡೈರಿ ಉತ್ಪನ್ನಗಳು ಅಥವಾ ಪರ್ಯಾಯ ಆಹಾರಗಳು ಹಾಲು, ಮೊಸರು ಮತ್ತು ಪನೀರ್‌ನಂತಹ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಅಂಶಗಳು ಹೇರಳವಾಗಿದ್ದು, ಇದು ಇದು ಬಲವಾದ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಬಹಳ ಸಹಾಯಕ. ಆದರೆ, ಲ್ಯಾಕ್ಟೋಸ್ ದೇಹಕ್ಕೆ ಒಗ್ಗದವರಿಗೆ ಅಥವಾ ಸಸ್ಯ-ಆಧಾರಿತ ಆಹಾರವನ್ನು ಮಾತ್ರವನ್ನು ಸೇವಿಸುವ ಮಕ್ಕಳಿಗೆ, ಬಾದಾಮಿ ಹಾಲು, ಸೋಯಾ ಹಾಲು ಅಥವಾ ಓಟ್ ಹಾಲಿನಿಂದ ತಯಾರಿಸಿದ ಪದಾರ್ಥಗಳನ್ನು ನೀಡಬಹುದು. ಬೀಜಗಳು ಬೀಜಗಳು ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್, ಫೈಬರ್ ಮತ್ತು ವಿಟಮಿನ್ ಇ, ಮೆಗ್ನೀಸಿಯಮ್ ನಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಬಾದಾಮಿ, ವಾಲ್ನಟ್ಸ್, ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳು ಮೆದುಳಿನ ಬೆಳವಣಿಗೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಅಗತ್ಯವಾದ ಆರೋಗ್ಯಕರ ಕೊಬ್ಬನ್ನು ಒದಗಿಸುತ್ತವೆ. ಹಸಿರು ಸೊಪ್ಪುಗಳು ವಾರದಲ್ಲಿ ಕನಿಷ್ಟ ಎರಡರಿಂದ ಮೂರು ಸೊಪ್ಪಿನ ಸಾರು ಹಾಗೂ ಮಕ್ಕಳಿಗೆ ಇಷ್ಟವಾಗುವಂತೆ ಸೊಪ್ಪಿನ ಪಲ್ಯಗಳನ್ನು ಮಾಡಿ ನೀಡುವುದು ಒಳ್ಳೆಯದು. ಏಕೆಂದರೆ, ಹಸಿರು ಸೊಪ್ಪುಗಳಲ್ಲಿ ಅದರಲ್ಲೂ ಮುಖ್ಯವಾಗಿ ಪಾಲಕ್ ಸೊಪ್ಪಿನಲ್ಲಿ ಜೀವಸತ್ವಗಳು ಮತ್ತು ಖನಿಜಗಳು, ಹಾಗೂ ವಿಟಮಿನ್ ಎ ಸಮೃದ್ಧವಾಗಿವೆ. ಇದು ಕಣ್ಣಿನ ದೃಷ್ಟಿ ಮತ್ತು ಪ್ರತಿರಕ್ಷಣಾ ಕಾರ್ಯವನ್ನು ಹೆಚ್ಚಿಸುತ್ತವೆ. ಅಲ್ಲದೆ, ಮೂಳೆಯ ಆರೋಗ್ಯಕ್ಕೆ ಅತಿ ಅಗತ್ಯವಾದ ವಿಟಮಿನ್ ಕೆ ಕೂಡ ಸೊಪ್ಪುಗಳಲ್ಲಿವೆ. ತರಕಾರಿಗಳು ತರಕಾರಿಗಳು ಸಮತೋಲಿತ ಆಹಾರದ ಮೂಲಾಧಾರವಾಗಿದ್ದು, ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಆಹಾರದ ಫೈಬರ್ ಅನ್ನು ಒದಗಿಸುತ್ತವೆ. ಕ್ಯಾರೆಟ್, ಬೆಲ್ ಪೆಪರ್, ಕೋಸುಗಡ್ಡೆ ಮತ್ತು ಸಿಹಿ ಆಲೂಗಡ್ಡೆಗಳು ವಿಟಮಿನ್ ಎ, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಅಂಶಗಳನ್ನು ಹೊಂದಿರುವುದರಿಂದ ಹೆಚ್ಚು ಪ್ರಯೋಜನಕಾರಿ. ಪ್ರತಿ ನಿತ್ಯ ಮಕ್ಕಳಿಗೆ ಆಹಾರದಲ್ಲಿ ವಿವಿಧ ಬಗೆಯ ತರಕಾರಿಗಳಿಂದ ತಯಾರಿಸಿದ ಆಹಾರವನ್ನು ನೀಡಬೇಕು. ಇದು ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಬಹಳ ಸಹಕಾರಿ. ಕ್ಯಾರೆಟ್, ಗೆಡ್ಡೆಕೋಸುವಿನಂತಹ ತರಕಾರಿಗಳನ್ನು ಹಸಿಯಾಗಿಯೂ ಸಹ ಸೇವಿಸಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.