NEWS

Happy Life: ಜೀವನದಲ್ಲಿ ಯಾವತ್ತೂ ಸಂತೋಷವಾಗಿರಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ!

ಸಾಂದರ್ಭಿಕ ಚಿತ್ರ ಜೀವನದಲ್ಲಿ (life) ನಾವು ಖುಷಿಯಾಗಿರಬೇಕೆಂದು (Happy) ಹಲವಾರು ಕೆಲಸಗಳನ್ನು ಮಾಡುತ್ತೇವೆ. ಶಾಂತಿಯುತ ನೆಮ್ಮದಿಯ ಜೀವನ ನಡೆಸಬೇಕು ಇದ್ದಷ್ಟು ದಿನ ಆರಾಮವಾಗಿರಬೇಕೆಂದು ನಿರ್ಧರಿಸಿ ನಮಗೆ ಒಳಿತಾಗುವ ಕೆಲಸಗಳನ್ನು ಮಾಡುತ್ತೇವೆ. ಆದರೆ ಇತರರಿಗೆ ಒಳಿತು ಮಾಡುವ ಮೂಲಕ ಕೂಡ ನಾವು ಸಂತೋಷವಾಗಿರಬಹುದೆಂಬ ಅಂಶವನ್ನು ನಾವು ತಡವಾಗಿ ತಿಳಿದುಕೊಳ್ಳುತ್ತೇವೆ. ಇನ್ನೊಬ್ಬರಿಗೆ ಸಹಾಯ ಮಾಡುವುದಾಗಿರಬಹುದು ಅವರ ಮುಖದಲ್ಲಿ ನಗುವನ್ನು ತರುವ ಕೆಲಸ ಮಾಡುವುದಾಗಿರಬಹುದು ಈ ಮೂಲಕ ನಮ್ಮ ಜೀವನದಲ್ಲಿ ನಲಿವನ್ನು ಕಾಣಬಹುದು ಎಂಬ ಅಂಶವನ್ನು ನಾವು ಮರೆತುಬಿಡುತ್ತೇವೆ. ಆದರೂ ಇನ್ನೂ ಸಮಯ ಮೀರಿಲ್ಲ ಇತರರಿಗೆ ಒಳಿತು ಮಾಡುವ ಮೂಲಕ ನಮ್ಮ ಜೀವನದಲ್ಲಿ ಖುಷಿ ಕಾಣೋಣ. ಆದಷ್ಟು ಇತರರಿಗೆ ಒಳ್ಳೆಯದು ಮಾಡಿ ದಯೆ ಎಂಬುದು ಸಂತೋಷವನ್ನುಂಟು ಮಾಡುತ್ತದೆ ಹಾಗೂ ಇದು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಅಧ್ಯಯನದ ಪ್ರಕಾರ ದಯೆಯು ಖಿನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ಅಸ್ವಸ್ಥತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದಷ್ಟು ಇತರರಿಗೆ ಸಹಾಯ ಮಾಡುವುದು ಇತರರ ಮೇಲೆ ದಯೆ ಕರುಣೆ ತೋರುವುದು ನಮ್ಮನ್ನು ಸಂತೋಷವಾಗಿರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ರಾತ್ರಿ ಮಿಕ್ಕಿರೋ ಚಪಾತಿ ಬೆಳಗ್ಗೆ ತಿಂದ್ರೆ ಅಪಾಯನಾ?; ಅಪ್ಪಿತಪ್ಪಿ ತಿಂದ್ರೆ ಏನಾಗುತ್ತೆ ಗೊತ್ತಾ? ನಿಮ್ಮ ಆದ್ಯತೆಗಳಿಗೆ ಪ್ರಾಶಸ್ತ್ಯ ನೀಡಿ ನಿಮ್ಮ ಆಸೆ ಬಯಕೆಗಳನ್ನು ಕಡೆಗಣಿಸಿ ಇತರರಿಗೆ ಪ್ರಾಶಸ್ತ್ಯ ನೀಡುವುದನ್ನು ಕಡಿಮೆ ಮಾಡಿ. ಸಂಶೋಧನೆಯ ಪ್ರಕಾರ ನಿಮಗೆ ನೀವು ಆದ್ಯತೆ ನೀಡುವುದು ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ ಹಾಗೂ ನಿಮ್ಮ ಯೋಗಕ್ಷೇಮಕ್ಕೆ ಉತ್ತಮವಾಗಿದೆ. ನೀವು ತೀವ್ರ ಒತ್ತಡಕ್ಕೆ ಒಳಗಾಗಿದ್ದೀರಿ ಎಂದಾದರೆ ನಿಮ್ಮ ಬಗ್ಗೆ ಆದ್ಯತೆ ನೀಡಿ. ವಿಶ್ರಾಂತಿಗೆ ಹಾಗೂ ನಿಮ್ಮನ್ನು ರೀಚಾರ್ಜ್ ಮಾಡಲು ಸಮಯ ನೀಡಿ. ನಿಮಗೆ ನೀವು ಆದ್ಯತೆ ನೀಡದೆ ಇತರರಿಗೆ ಆದ್ಯತೆ ನೀಡಲಾಗುವುದಿಲ್ಲ ಎಂಬುದನ್ನು ಮರೆಯದಿರಿ. ನಿಮ್ಮ ಸುತ್ತಲೂ ಧನಾತ್ಮಕತೆಯನ್ನು ನಿರ್ಮಿಸಿ ಆದಷ್ಟು ಧನಾತ್ಮಕವಾಗಿರುವ ವ್ಯಕ್ತಿಗಳೊಂದಿಗೆ ಸಮಯ ಕಳೆಯಿರಿ. ಜೀವನದಲ್ಲಿ ಋಣಾತ್ಮಕತೆಯನ್ನು ಬದಿಗೊತ್ತಿ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಿ. ಉತ್ತಮ ಜನರ ಸ್ನೇಹ ಬೆಳೆಸಿಕೊಳ್ಳಿ. ಧನಾತ್ಮಕ ಪ್ರವೃತ್ತಿಯ ಜನರೊಂದಿಗೆ ಹೆಚ್ಚು ಸಮಯ ಕಳೆಯುವುದು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನುಂಟು ಮಾಡುತ್ತದೆ. ಯಾವುದನ್ನೂ ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳದಿರಿ ಯಾವುದೇ ಸಂಗತಿಯಾಗಿರಬಹುದು ಅದನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದಿರಿ. ವೃತ್ತಿಯಾಗಿರಬಹುದು ಇಲ್ಲವೇ ವೈಯಕ್ತಿಕವಾಗಿರಬಹುದು ಅತಿಯಾಗಿ ಅದರ ಬಗ್ಗೆಯೇ ಯೋಚಿಸುತ್ತಾ ಮರುಗದಿರಿ. ಯಾವುದನ್ನೂ ಗಂಭೀರವಾಗಿ ಪರಿಗಣಿಸದೆ ಅದೊಂದು ಜೀವನ ಪಾಠ ಎಂಬುದಾಗಿ ಕಾಣಿ ಇದೊಂದು ಅನುಭವ ಎಂದು ಮನಗಾಣಿ. ಹಿಂದಿನದ್ದನ್ನು ಮರೆತು ಮುಂದಕ್ಕೆ ಅಡಿಯಿಡಿ ಹಿಂದಿನ ಕೆಟ್ಟ ನೆನಪುಗಳು, ಆಘಾತಗಳು ನಿಮ್ಮನ್ನು ದುಃಖಕ್ಕೆ ಈಡುಮಾಡುತ್ತಿದೆ ಎಂದಾದರೆ ಅದನ್ನು ಅಲ್ಲಿಯೇ ಮರೆತು ಇಂದು ನಿಮಗೆ ಜೀವನ ನೀಡುತ್ತಿರುವ ಖುಷಿಯನ್ನು ಆಸ್ವಾದಿಸಿಕೊಳ್ಳಿ. ಹಳೆಯದನ್ನು ಮರೆತು ಹೊಸ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನ ಪ್ರಯಾಣದಲ್ಲಿ ನೀವೆಲ್ಲಿದ್ದೀರಿ ಎಂಬುದಕ್ಕೆ ನಿಮ್ಮನ್ನು ನೀವು ಪ್ರಶಂಸಿಸಿ ನಿಮ್ಮ ಜೀವನದಲ್ಲಿ ನೀವು ಎಲ್ಲಿದ್ದೀರಿ ಯಾವ ನೆಲೆಯಲ್ಲಿದ್ದೀರಿ ಎಂಬದನ್ನು ನೆನೆದು ಖುಷಿಪಡಿ. ಇದು ನಿಮ್ಮ ಸಾಧನೆಯಾಗಿದೆ ಎಂಬುದನ್ನು ಮರೆಯದಿರಿ. ಹಿಂದಿನ ಜೀವನಕ್ಕೂ ಇಂದಿನ ಜೀವನಕ್ಕೂ ಹೋಲಿಕೆ ಮಾಡಿ ಹಾಗೂ ಇಂದು ಈ ನೆಲೆ ತಲುಪಲು ನೀವೆಷ್ಟು ಕಷ್ಟಪಟ್ಟಿದ್ದೀರಿ ಎಷ್ಟು ಶ್ರಮವಹಿಸಿದ್ದೀರಿ ಎಂಬುದನ್ನು ನೆನೆದು ಖುಷಿಪಡಿ. ಒಂದೇ ವಿಷಯಕ್ಕೆ ಆದ್ಯತೆ ನೀಡಿ ಎಲ್ಲಾ ವಿಷಯಗಳನ್ನು ಒಮ್ಮೆಲೆ ಮಾಡಿ ಮುಗಿಸುತ್ತೇನೆ ಎಂದು ಭಾವಿಸಿ ಹೆಚ್ಚಿನ ಒತ್ತಡವನ್ನು ನಿಮ್ಮ ಮೇಲೆ ಹೇರಿಕೊಳ್ಳದಿರಿ. ಒಂದೇ ವಿಷಯಕ್ಕೆ ಆದ್ಯತೆ ನೀಡುವ ಮೂಲಕ ಅದನ್ನು ಮುಗಿಸಿಕೊಳ್ಳಿ. ಹತ್ತು ಹಲವು ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಅದನ್ನು ಮುಗಿಸುತ್ತೇನೆ ಎಂದು ಹೊರಡದಿರಿ. ಒಂದೇ ಸಮಯಕ್ಕೆ ಒಂದು ಕೆಲಸ ಪೂರ್ಣಗೊಳಿಸಿ ಎಲ್ಲರೂ ನಿಮ್ಮನ್ನು ಇಷ್ಟಪಡುವುದಿಲ್ಲ ಅದನ್ನು ಅಂಗೀಕರಿಸಿ ಎಲ್ಲರೂ ನಿಮ್ಮನ್ನು ಮೆಚ್ಚಿಕೊಳ್ಳುವುದಿಲ್ಲ ಹಾಗೂ ಎಲ್ಲರು ನಿಮ್ಮನ್ನು ಮೆಚ್ಚಿಕೊಳ್ಳಬೇಕೆಂದು ಅವರನ್ನು ಅನುನಯಿಸಲು ಹೋಗದಿರಿ. ಎಲ್ಲರಿಗೂ ನೀವು ಒಪ್ಪಿಗೆಯಾಗಬೇಕೆಂದಿಲ್ಲ ಇದು ಸತ್ಯ ಎಂಬುದನ್ನು ಅಂಗೀಕರಿಸಿ. ಹಾಗೆಂದು ನಿಮ್ಮ ಸಂತೋಷವನ್ನು ಮರೆತು ಇತರರಿಗೆ ಆದ್ಯತೆ ನೀಡದಿರಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.